ಅಲ್ಪಸಂಖಾರಿಗೆ ಟಿಕೇಟ್ ನೀಡಲು ಖಲೀ ಮುಲ್ಲಾ ಖಾನ್ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.01:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕನಿಷ್ಠ ಪಕ್ಷ 3 ಪಾರ್ಲಿಮೆಂಟ್ ಸೀಟೆಗಳಿಗೆ ಅಲ್ಪಸಂಖಾರಿಗೆ ಟಿಕೇಟ್ ನೀಡಬೇಕು ಎಂದು ಕೊಡಗು ಮುಸ್ಲಿಮ್ಸ್ ವೆಲಫೇರ್ ಅಸೋಸಿಯೇಷನ್ (ರಿ) ಅಧ್ಯಕ ಖಲೀ ಮುಲ್ಲಾ ಖಾನ್ ಒತ್ತಾಯಿಸಿದರು.
ನಂತರ ಪ್ರಕಟಣೆಯಲ್ಲಿ ತಿಳಿಸಿದ ಅವರು, ನನ್ನ ಅನುಭವದ ಪ್ರಕಾರ ನಾನು ಭರವಸೆ ಇಟ್ಟಿರುವುದೇನೆಂದರೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗ ಕೆಪಿಸಿಸಿ ಅಧ್ಯಕರಾದ ಡಿಕೆ. ಶಿವಕುಮಾರರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷÀವು ಖಂಡಿತವಾಗಿಯೂ ಉತ್ತಮ ಫಲಿತಾಂಶವನ್ನು ಪಡೆಯುತ್ತದೆ. ತದ ನಂತರ ಇದು ಅಲ್ಪ ಸಂಖಾತ ಕೋಶವಾಗಿ ಪರಿವರ್ತನೆಯಾಗಿದ್ದು, ಆ ನಂತರ, ದಿವಂಗತ ದೇವರಾಜ ಅರಸುರವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿದ್ದರು ನಾವು ಅವರು ಅಧಿಕಾರದಲ್ಲಿದ ದಿನಗಳನ್ನು ಮೆಲುಕು ಹಾಕಿಕೊಳ್ಳಬಹುದು. ಹಾಲಿ ಸಿದ್ದರಾಮಯ್ಯ ಜೀ ರವರು ನಮ್ಮ ಮುಖ್ಯ ಮಂತ್ರಿಯಾಗಿರುತ್ತಾರೆ. ಹಾಗತಾ ಡೈನಾಮಿಕ್ ವ್ಯಕ್ತಿಯಾದ ಡಿ.ಕೆ. ಶಿವಕುಮಾರರವರು ಕೆ.ಪಿ.ಸಿ.ಸಿ. ಅಧ್ಯಕರಾಗಿರುತ್ತಾರೆ. ಇವರು ಉತ್ತಮ ಕಾರ್ಯನಿರ್ವಹಣೆಗೆ ಪ್ರಸ್ತುತ ಇತ್ತೀಜಿಗೆ ನಡೆದ ರಾಜ್ಯ ಸಭಾ ಚುನಾವಣೆಯೇ ಸಾಕ್ಷಿ ಎಂದರು.
ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಪ್ರಥಮವಾಗಿ ಅಲ್ಪ ಸಂಖ್ಯಾತ ವಿಭಾಗವನ್ನು ತೆರೆದವರಾಗಿರುತ್ತಾರೆ. ಇವರು ಅಧ್ಯಕ್ಷರಾಗಿ ಹಾಗೂ ದಿವಂಗತ ಅಜೀಜ್ ಸೇಠ್ ರವರ ಸಂಚಾಲಕರಾಗಿ ಇದ ಸಮಯದಲ್ಲಿ ನಾನು ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿರುತ್ತೇನೆ. ಜಾತ್ಯಾತೀತ ಪಕ್ಷವಾದ ಜನತಾ ದಳವು ಮುಂಬರುವ ಲೋಕಸಭಾ ಚುನಾವಣೆಂಯಲ್ಲಿ ಶೇಕಡಾ 1 ರಷ್ಟು ಅಲ್ಪ ಸಂಖ್ಯಾತರ ಮತಗಳನ್ನು ಸಹ ಪಡೆಯುವುದಿಲ್ಲ ಎಂದು ಖಲೀ ಮುಲ್ಲಾ ಖಾನ್ ತಿಳಿಸಿದ್ದರು.