ಯೋಜನಾ ನಿರ್ದೇಶಕರಿಂದ ಕೆರೆಯ ನೀರಿನ ಮಟ್ಟ ಪರಿಶೀಲನೆ
ತಾಳಿಕೋಟೆ:ಮಾ.1: ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿರುವ ಮಾಳನೂರ ಕೇರೆಯ ನೀರಿನ ಮಟ್ಟವನ್ನು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಅವರು ಬುಧವಾರರಂದು ಬೆಟ್ಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು ಬೇಸಗಿಯ ಕಾಲವಿರುವದರಿಂದ ತಾಳಿಕೋಟೆ ಪಟ್ಟಣದ ಜನರಿಗೆ ನೀರನ್ನು ಮಿತಿವ್ಯಯವಾಗಿ ಬಳೆಸಲು ಸೂಚಿಸಿ ನೀರು ಹೆಚ್ಚು ಪೋಲು ಮಾಡದಂತೆ ಸಲಹೆಗಳನ್ನು ನೀಡಿರಿ ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೇರೆಗೆ ನೀರು ಹರಿಸಲಾಗುತ್ತಿದೆ ಅದರಂತೆ ನಾರಾಯಣಪೂರ ಡ್ಯಾಂನಿಂದ ನೀರು ಬಿಡುಗಡೆಯಾಗುವ ಸಾದ್ಯತೆಗಳು ಇದ್ದು ಅಲ್ಲಿಯ ವರೆಗೂ ಹೆಚ್ಚಿನ ಮುತುವರ್ಜಿ ವಹಿಸಲು ಸ್ಥಳದಲ್ಲಿಯೇ ಇದ್ದ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರಿಗೆ ಸೂಚಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಅವರು ಮಾರ್ಚ ಅಚಿತ್ಯದ ವರೆಗೆ ಕುಡಿಯುವ ನೀರಿನ ತೊಂದರೆಯಾಗದಷ್ಟು ಸದ್ಯಕ್ಕೆ ಕೇರೆಯಲ್ಲಿ ನೀರು ಇದ್ದು ನಂತರ ದಿನಗಳಲ್ಲಿ ನೀರು ಪೂರೈಕೆಯ ದಿನಗಳನ್ನು ವಿಸ್ತರಿಸುವ ಬಗ್ಗೆ ಆಲೋಚನೆಯನ್ನು ಹಾಕಿಕೊಂಡಿದ್ದೇವೆಂದು ನೀರು ಸರಬರಾಜುಗೆ ಸಂಬಂದಿಸಿ ಮಾಹಿತಿಯನ್ನು ಒದಗಿಸಿದರು.
ಈ ಸಮಯದಲ್ಲಿ ಪುರಸಭೆ ನೀರು ಸರಬರಾಜು ವಿಭಾಗದ ಶಂಕರಗೌಡ ಬಿರಾದಾರ, ಕಿರಿಯ ಅಭಿಯಂತರ ಸಂದೀಪ ವಠಾರ, ಮೊದಲಾದವರು ಇದ್ದರು.