ವಿಜೃಂಬಣೆಯಿಂದ ಜರುಗಿದ ಶ್ರೀ ಅಂಬಾಭವಾನಿ ಜಯಂತ್ಯೋತ್ಸವ
ತಾಳಿಕೋಟೆ:ಮಾ.1: .ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ಅಂಬಾಭವಾನಿ ಮಂದಿರದ ಜಯಂತ್ಯೋತ್ಸವವು ಗುರುವಾರರಂದು ಭಕ್ತಿಭಾವದೊಂದಿಗೆ ವಿಜೃಂಬಣೆಯಿಂದ ಜರುಗಿತು.
ಜಯಂತ್ಯೋತ್ಸವ ಅಂಗವಾಗಿ ಬೆಳಗಿನ ಜಾವ ಶ್ರೀ ಅಂಬಾಭವಾನಿ ದೇವಿಯ ಮಹಾ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
ನಂತರ ಶ್ರೀ ಮಂದಿರದಲ್ಲಿ ದೆವಸ್ಥಾನದ ಅರ್ಚಕರಾದ ವೇ.ಭೀಮಾಶಂಕರ ಜೋಶಿ ಮತ್ತು ಸಂಗಡಿಗರಿಂದ ಹೋಮಹವನ ಕಾರ್ಯಕ್ರಮಗಳು ಜರುಗಿದವು.
ನಂತರ ಸುಮಂಗಲೆಯರ ಕುಂಭ, ಕಳಸ, ಫಲ್ಲಕ್ಕಿ ಉತ್ಸವದ ಹಾಗೂ ಶ್ರೀ ಅಂಬಾಭವಾನಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆಯು ಶ್ರೀ ಮಂದಿರದಿಂದ ಪ್ರಾರಂಭಗೊಂಡು ಕತ್ರಿ ಬಜಾರ, ರಾಜವಾಡೆ, ಮೂಲಕ ಭಾವನಮಠದ ಪುರಾತನ ಭಾವಿಯೊಳಗೆ ಗಂಗಸ್ಥಳ ಕಾರ್ಯಕ್ರಮದೊಂದಿಗೆ ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜರ ವೃತ್ತ, ವಿಠ್ಠಲ ಮಂದಿರ ರಸ್ತೆಯ ಮೂಲಕ ಮಳಿಗೆ ದೇವಸ್ಥಾನ ತಲುಪಿತು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಣೆಯೊಂದಿಗೆ ಜಯಂತ್ಯೋತ್ಸವ ಮಂಗಲಗೊಂಡಿತು.
ಜಯಂತ್ಯೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ಒಂದು ಜೋಡಿ ವರ ಶ್ರೀಧರ ವಧು ಫಲ್ಲವಿ ಅವರ ಮಧುವೆ ಸಮಾರಂಭವನ್ನು ಸಮಾಜದ ವತಿಯಿಂದ ನಡೆಸಿಕೊಡಲಾಯಿತು.
ಇದೇ ಸಮಯದಲ್ಲಿ ಸಮಾಜದ ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಮೆರವಣಿಗೆಯ ನೇತೃತ್ವವನ್ನು ಭಾವಸಾರ ಕ್ಷತ್ರೀಯ ಸಮಾಜದ ಉಪಾಧ್ಯಕ್ಷ ಮಲ್ಲಾರಿ ದರ್ಜಿ, ವಿಜಯ ಮಹೇಂದ್ರಕರ, ಸುಭಾಸ ಮಹೇಂದ್ರಕರ, ಯಲ್ಲಪ್ಪ ದಾಯಪುಲೆ, ಗೋಪಾಲ ಬೇದರಕರ, ಕೋನೇರಪ್ಪ ಹಂಚಾಟೆ, ಯಲ್ಲೋಜಿ ಮಹೇಂದ್ರಕರ, ಚಿನ್ನಪ್ಪ ದಾಯಪುಲೆ, ವಿಜಯ ದರ್ಜಿ, ರಾಜು ಮುಕುಂದ ಹಂಚಾಟೆ, ವೇಣಗೋಪಾಲ ಹಂಚಾಟೆ, ನಾಗೇಶ ಮಹೇಂದ್ರಕರ, ಕೃಷ್ಣಾಜಿ ಹಂಚಾಟೆ, ರಘುನಾಥ ಬಾಸುತಕರ, ಸುರೇಶ ಪುಲಸ, ಮನಿಷ ಮಹೇಂದ್ರಕರ, ವಿಜಯ ಮಹೇಂದ್ರಕರ, ಅಭಿಷೇಕ ಮಹೇಂದ್ರಕರ, ಚಂದ್ರಕಾಂತ ಗಣಾತೆ, ಶ್ರೀನಿವಾಸ ರಂಗಸುಭೆ, ಯಶ್ ಮಹೇಂದ್ರಕರ, ಲಕ್ಷ್ಮಣ ಮಹೇಂದ್ರಕರ, ತಿರುಪತಿ ಹಂಚಾಟೆ, ಮೊದಲಾದವರು ವಹಿಸಿದ್ದರು.