ರ್ಯಾಗಿಂಗ್ ಒಂದು ಕ್ರಿಮಿನಲ್ ಅಪರಾಧ: ಎಸ್.ಐ ಕೃಷ್ಣವೇಣಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.1 ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಅನ್ನುವದು ವಿಪರೀತ ಕಿರುಕುಳ ನೀಡುವದರ ಜೊತೆಗೆ ಮಾನಸಿಕ ಭಯವನ್ನು ಉಂಟು ಮಾಡುತ್ತದೆ ಎಂದು ಜಲನಗರ ಪೆÇಲೀಸ್ ಠಾಣೆ ಪಿ.ಎಸ್.ಐ ಕೃಷ್ಣವೇಣಿ ಹೇಳಿದರು.
ಬಿ.ಎಲ್.ಡಿ.ಈ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ ವಿಜಯಪುರ ಐ.ಕ್ಯೂ .ಎಸಿ ವತಿಯಿಂದ ಸ್ವಯಂ ರಕ್ಷಣಾ ಕಾರ್ಯ ವಿಧಾನವೆಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರ್ಯಾಗಿಂಗ್ ಒಂದು ಕ್ರಿಮಿನಲ್ ಅಪರಾಧವಾಗಿದ್ದು, ಇಂತಹ ಹಾವಳಿಗಳನ್ನು ತಡೆಯಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಲಾಗಿದೆ. ಇದು ಮಾನವ ಹಕ್ಕುಗಳ ದುರುಪಯೋಗದ ವ್ಯವಸ್ಥಿತ ರೂಪವಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವಿದ್ಯಾರ್ಥಿನಿಯರು ಧೈರ್ಯ ಮತ್ತು ಆತ್ಮ ಸ್ಥೈರ್ಯದಿಂದ ಸಮಾಜವನ್ನು ಎದುರಿಸುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಕಂಡು ಬರುವ ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಸರಕಾರವು ಅಂತರ್ ಜಾಲತಾಣದ ಮೂಲಕ ಕ್ರಮ ಕೈಗೊಂಡಿದ್ದು, ಬಾಧಿತರು ದೇಶದ ಯಾವುದೇ ಮೂಲೆಯಿಂದಲೂ ಇದ್ದರೂ ದೂರು ಸಲ್ಲಿಸಬಹುದೆಂದು ಪೆÇಲೀಸ್ ಹೆಡ್ ಕಾನ್ಸಸ್ಟೇಬಲ್ ಜಯಂತಿ ನಾಯಕ ಅವರು ಹೇಳಿದರು.
ಹೆಣ್ಣು ಮಕ್ಕಳು ಯಾವುದರಲ್ಲಿಯೂ ಕಡಿಮೆಯಿಲ್ಲಾ.ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದೆಂದು ಪೆÇಲೀಸ್ ಪೇದೆ ಸಂಗೀತಾ ಸೇಡಬಾಳ ನುಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಾಯ್. ತಮ್ಮಣ್ಣ ಅವರು ವಿದ್ಯಾರ್ಥಿನಿಯರು ಪ್ರಕರಣದ ಗಂಭೀರತೆಯನ್ನು ಅವಲಂಬಿಸಿ ತಕ್ಷಣ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿಯನ್ನು ನೀಡಬೇಕೆಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಆಯ್.ಕ್ಯೂ.ಎಸಿ ಸಂಯೋಜಕ ವಿ.ಎಸ್ .ನಂದೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ ಎಚ್.ಎಸ್ ದೇಸಾಯಿ ಸ್ವಾಗತಿಸಿದರು .ಕುಮಾರಿ ಸುಧಾ ಕಟ್ಟಿ ಪ್ರಾರ್ಥನಾ ಗೀತೆ ಹಾಡಿದರು ಡಾ. ಆರ್.ಜಿ. ಕಮತರ ನಿರೂಪಿಸಿದರು. ವೀಣಾ ಮೆಳ್ಳಿಗೇರಿ ವಂದಿಸಿದರು.