ತೋಟಗಾರರ ಸಹಕಾರ ಸಂಘದ ಸಾಮಾನ್ಯ ಸಭೆ
ಕೆ.ಆರ್. ಪುರ,ಸೆ.೧೬- ಸಹಕಾರ ಸಂಘದಿಂದ ನಿವ್ವಳ ಲಾಭ ಹೆಚ್ಚಾಗಿ ದೊರೆಯುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘದ ಅಧ್ಯಕ್ಷ ಹರೀಶ್ ಬಾಬು ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಮುನೇಕೊಳಲುನಲ್ಲಿ ಏರ್ಪಡಿಸಿದ್ದ ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘದ ಏಳನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಬ್ಯಾಂಕುಗಳು ಮತ್ತು ಬೇರೆ ಕೋ ಆಪರೇಟಿವ್ ಬ್ಯಾಂಕ್ ಗಳಿಗಿಂತ ತೋಟಗಾರರ ಸಹಕಾರ ಸಂಘ ಹೆಚ್ಚು ಲಾಭದಾಯಕವಾಗಿದೆ. ಇತರೆ ಸೊಸೈಟಿ ಮತ್ತು ಬ್ಯಾಂಕ್ ಗಳಲ್ಲಿ ವಾರ್ಷಿಕ ಶೇಕಡಾ ೬-೭ % ರಷ್ಟು ಲಾಭಾಂಶ ನೀಡಿದರೆ ಕೆ.ಎನ್.ಟಿ.ಎಸ್.ಎಸ್. ಬ್ಯಾಂಕ್ ಎಲ್ಲಾರಿಗಿಂತಲೂ ಅಧಿಕ ಶೇಕಡಾ ೧೫ ರಷ್ಟು ಡಿವಿಡೆಂಡ್ ಕೊಡಲಾಗಿದೆ ಎಂದರು.ಈ ವರ್ಷ ಸುಮಾರು ೨೪ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಯಸಸ್ವಿಯಾಗಿ ಸಾಗುತ್ತಿದೆ ಎಂದರು.
ಕಳೆದ ವರ್ಷ ಮತ್ತು ಈ ವರ್ಷ ೨೦೨೧-೨೦೨೪ ರ ವರೆಗೂ ಸಹ ನಮ್ಮ ಠೇವಣಿದಾರರಿಗೆ ಶೇಕಡಾ ೧೫ ರಷ್ಟು ಡಿವಿಡೆಂಟ್ ನೀಡಲಾಗಿದೆ ಎಂದರು .
ಬ್ಯಾಂಕ್ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಇದಕೆಲ್ಲಾ ದುಡಿದ ಎಲ್ಲಾ ನಿರ್ದೇಶಕರಿಗೆ ಮತ್ತು ಠೇವಣಿದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬೃಂದಾ ಶ್ರೀ, ಸ್ಪೂರ್ತಿ, ಗಣಿತ ಕ್ಷೇತ್ರದಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸಾದನೆ ಗೈದಿರುವ ರೋಹಿತ್ ರಾಜೇಶ್ ಮತ್ತು
ಎಸ್ ಎಸ್ ಎಲ್ ಸಿ,ಪಿಯುಸಿ,ಪದವಿ ಕಾಲೇಜಿನಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುರಸ್ಕಾರ ಗಳನ್ನು ನೀಡಲಾಯಿತು .
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ತಿಗಳ ಸಂಘದ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ವೈ.ಜಗನ್ನಾಥ್, ನಿರ್ದೇಶಕರಾದ ಎಸ್.ಗೋಪಾಲಯ್ಯ.ರಾಮಚಂದ್ರಪ್ಪ,ಟಿ ಚಂದ್ರಪ್ಪ,ಕೆ ಮಂಜುನಾಥ್, ಸೋಮಶೇಖರ್,ರಘುನಾಥ್ , ಲೋಕೆಶ್ ಕೃಷ್ಣಮೂರ್ತಿ,ರಾಜೇಶ್, ಹಾಗೂ ಸಂಘದ ಎಲ್ಲಾ ನಿರ್ದೆಶಕರು ಇದ್ದರು.