ದಿ ಮೈಸೂರು ಕೋ- ಅಪರೇಟಿವ್ ಬ್ಯಾಂಕ್‍ನ 118ನೆ ವಾರ್ಷಿಕ ಸಭೆ ಯಶಸ್ವಿ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.16:- ಶತಮಾನೋತ್ಸವವನ್ನು ಪೂರೈಸಿರುವ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ 2023-24ನೇ ಸಾಲಿನ 118ನೇ ವಾರ್ಷಿಕಸರ್ವ ಸದಸ್ಯರ ಸಭೆ ನಡೆದು,ಸಾವಿರಾರು ಸದಸ್ಯರು ಪಾಲ್ಗೊಂಡಿದ್ದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಮಂಟಪದಲ್ಲಿ ಅಧ್ಯಕ್ಷರಾದ ಪಿ. ರಾಜೇಶ್ವರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-24ನೇ ಸಾಲಿನ ವರದಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಬ್ಯಾಂಕಿನ ಖರ್ಚು,ಆದಾಯ, ನಿವ್ವಳ ಲಾಭ,ಸದಸ್ಯರಿಗೆ ಮಾಡಿರುವ ಅನುಕೂಲಗಳ ಬಗ್ಗೆ ಮಂಡಿಸಲಾಯಿತು. ಸಭೆಯಲ್ಲಿ ಸದಸ್ಯರು ಕೇಳಿದ ಹಲವಾರು ಪ್ರಶ್ನೆಗಳಿಗೆ ಹಿರಿಯ ನಿರ್ದೇಶಕ ಎಸ್‍ಬಿಎಂ ಮಂಜು, ಎಸ್.ಆರ್.ರವಿಕುಮಾರ್,ಕೆ.ಉಮಾಶಂಕರ್ ಸಮರ್ಪಕವಾದ ಉತ್ತರ ನೀಡಿದರು. ಮರಣ ನಿಧಿಯನ್ನು ಪಾವತಿಸುವ ಬಗ್ಗೆ ತೀರ್ಮಾನ ಮಾಡಿರುವ ಬಗ್ಗೆ ಅನೇಕರು ಅಪಸ್ವರ ತೆಗೆದು, ಅನಗತ್ಯ ವೆಚ್ಚವನ್ನು ಕಡಿಮೆ ಮಾಡಿ ಮರಣ ನಿಧಿಗೆ ಇಡಬೇಕು ಎಂದು ಸಲಹೆ ನೀಡಿದರು. ನಂತರ, ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಪಿ.ಸವಿತಾ, ನಿರ್ದೇಶಕರಾದ ಆರ್.ರವಿಕುಮಾರ್, ಜೆ.ಯೋಗೇಶ್, ಎಚ್.ಹರೀಶ್ ಕುಮಾರ್, ಎಚ್.ಅರವಿಂದ, ಎ.ಮಂಚಪ್ಪ, ಪಡುವಾರಹಳ್ಳಿ ರಾಮಕೃಷ್ಣ, ಸಿ,ರೇವಣ್ಣ, ಎಸ್.ಶಿಲ್ಪ,ಎಂ.ವೈ. ರಮೇಶಗೌಡ, ಸಿ.ಎಸ್.ರಾಮಕೃಷ್ಣಯ್ಯ, ಸಿಇಒ ಕೆ.ಹರ್ಷಿತ್ ಗೌಡ ಮತ್ತಿತರರು ಹಾಜರಿದ್ದರು. ಸಂಘದ ಪ್ರತಿ ಸದಸ್ಯರೊಬ್ಬರಿಗೂ ಸಿಹಿ ಉಡುಗೊರೆಯನ್ನು ನೀಡಲಾಯಿತು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಮಂಟಪದಲ್ಲಿ ಅಧ್ಯಕ್ಷರಾದ ಪಿ. ರಾಜೇಶ್ವರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾದ ಪಿ.ಸವಿತಾ, ನಿರ್ದೇಶಕರಾದ ಎಸ್‍ಬಿಎಂ ಮಂಜು, ಎಸ್.ಆರ್.ರವಿಕುಮಾರ್,ಕೆ.ಉಮಾಶಂಕರ್,ಆರ್.ರವಿಕುಮಾರ್, ಜೆ.ಯೋಗೇಶ್, ಎಚ್.ಹರೀಶ್ ಕುಮಾರ್, ಎಚ್.ಅರವಿಂದ, ಎ.ಮಂಚಪ್ಪ, ಪಡುವಾರಹಳ್ಳಿ ರಾಮಕೃಷ್ಣ, ಸಿ,ರೇವಣ್ಣ, ಎಸ್.ಶಿಲ್ಪ,ಎಂ.ವೈ. ರಮೇಶಗೌಡ, ಸಿ.ಎಸ್.ರಾಮಕೃಷ್ಣಯ್ಯ, ಸಿಇಒ ಕೆ.ಹರ್ಷಿತ್ ಗೌಡ ಮತ್ತಿತರರು ಹಾಜರಿದ್ದರು.