ಸೆ.17ರ ವಿಶ್ವಕರ್ಮ ಜಯಂತಿಯನ್ನು ಮುಂದೂಡಲು ಸಮಾಜ ಮುಖಂಡರ ನಿರ್ಧಾರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.16:- ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಸೆ.17ರಂದು ನಡೆಯಬೇಕಾಗಿದ್ದ ವಿಶ್ವಕರ್ಮ ಜಯಂತಿಯನ್ನು ಮುಂದೂಡಲು ನಿರ್ಧರಿಸಿ, ಮುಂದಿನ ದಿನದಲ್ಲಿ ಸಮಾಜದ ಎಲ್ಲಾ ಬಂಧುಗಳನ್ನು ಆಹ್ವಾನಿಸಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಆ ದಿನ ನಡೆಯುವ ಜಯಂತಿಯನ್ನು ಮುಂದೂಡಲು ತಿಳಿಸಲಾಯಿತು.
ನಗರದ ಕೊಳದ ಬೀದಿಯಲ್ಲಿರುವ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಅವರಣದಲ್ಲಿ ಸಮಾಜದ ಯಜಮಾನರಾದ ಚಾ.ನಗರದ ಅನಂತಕುಮಾರ್, ಹರದನಹಳ್ಳಿ ಡಿ. ಎಲ್. ಕುಮಾರ್, ಕಾಡಹಳ್ಳಿ ಸೋಮಣ್ಣ ಚಾರ್ ಅವರ ನೇತೃತ್ವದಲ್ಲಿ ಮುಖಂಡರ ಸಭೆ ನಡೆಸಿ, ಸೆ. 17 ರಂದು ವಿಶ್ವ ಕರ್ಮ ಜಯಂತಿಯನ್ನು ಆಚರಣೆ ಮಾಡಲು ಜಿಲ್ಲಾಡಳಿತ ಪೂರ್ವಭಾವಿ ನಡೆಸಲು ಚಿಂತನೆ ಮಾಡಿತ್ತು. ಕಾಲವಕಾಶ ಕಡಿಮೆ ಇರುವುದು ಮತ್ತು ಗೌರಿ ಗಣೇಶ ಹಬ್ಬ ಅಚರಣೆ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯ ಒತ್ತಡದಲ್ಲಿ ಅಧಿಕಾರಿ ವರ್ಗದವರು ಇದ್ದು, ಸಮಾಜದ ಬಂಧುಗಳು ಈ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಷ್ಟಸಾಧ್ಯವಾಗಿರುವುದರಿಂದ ಆ ದಿನವನ್ನು ಕೈ ಬಿಟ್ಟು ಸೆಪ್ಟೆಂಬರ್ ತಿಂಗಳ ಒಳಗೆ ದಿನಾಂಕವನ್ನು ನಿಗಧಿ ಮಾಡಿ ವಿಶ್ವ ಕರ್ಮ ಜಯಂತಿ ಅನ್ನು ಆಚರಣೆ ಮಾಡಲು ಪ್ರಮುಖರು ತಿರ್ಮಾನಿಸಿ, ಜಿಲ್ಲಾಧಿಕಾರಿಗಳಿಗೆ ತಿಳಿಸಲು ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು.