ಬಾಲ್ಯದಲ್ಲೇ ಮೌಢ್ಯಗಳನ್ನು ತೊಡೆದು ಹಾಕಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಲಿಂಗರಾಜ್‍ಅರಸ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.01- ಮಕ್ಕಳ ಮನಸ್ಸು ಹಸಿಯಾದ ಸಿಮೆಂಟ್ ಇದ್ದ ಹಾಗೆ ಅಲ್ಲಿಏನಾದರೂ ಬರೆಯಬಹುದುಆದರೆಒಂದು ಬಾರಿಅದುಒಣಗಿದರೆ ಆ ಮೇಲೆ ಏನೂ ಮಾಡಲಾಗುವುದಿಲ್ಲ. ಅದೇರೀತಿ ಬಾಲ್ಯದಲ್ಲೇ ಮೌಢ್ಯಗಳನ್ನು ತೊಡೆದು ಹಾಕಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದುಡಯಟ್ ಹಿರಿಯಉಪನ್ಯಾಸಕ ಲಿಂಗರಾಜ್‍ಅರಸ್ ಹೇಳಿದರು.
ತಾಲ್ಲೂಕಿನ ವೆಂಕಟಯ್ಯನಛತ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮೆಹಂದಿ, ಚಿತ್ರಕಲೆ, ರಂಗೋಲಿ ಹಾಗೂ ಪ್ರಯೋಗ ವಿವರಣೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ವಿಜ್ಞಾನ ದೀವಿಗೆ ಹಿಡಿದುಕೊಂಡು ನಾವೆಲ್ಲಾ ಸಾಗಬೇಕು. ಸತ್ಯವಾದ ಮಾರ್ಗದಲ್ಲಿ ಸಾಗಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಕಲಿಯಬೇಕು. ಭಾರತ ವಿಜ್ಞಾನಕ್ಷೇತ್ರದಲ್ಲಿಗುರುತರ ಸಾಧನೆ ಮಾಡಿದೆ. ಸಮುದ್ರದೊಳಗೆ ಸೇತುವೆಕಟ್ಟುವಷ್ಟರ ಮಟ್ಟಿಗೆತಂತ್ರಜ್ಞಾನ ಮುಂದುವರಿದಿದೆ. ಭಾರತ ಬಲಿಷ್ಠ ರಾಷ್ಟ್ರವಾಗಿದ್ದು, ಇಲ್ಲಿನಜನರುಅμÉ್ಟೀ ಬಲಿಷ್ಠರಾಗಿದ್ದಾರೆ. ಆದರೆ ನಮ್ಮ ಶಕ್ತಿ ನಮ್ಮಅರಿವಿಗೆ ಬರುತ್ತಿಲ್ಲಎಂದರು.
ವಿದ್ಯಾರ್ಥಿಗಳು ಯಾವಾಗಲೂ ಪಾಸಿಟಿವ್ ಆಗಿರಬೇಕು. ದುಶ್ಚಟಕ್ಕೆದಾಸರಾಗದೆ ಒಳ್ಳೆಯ ಗುಣ ಅಳವಡಿಸಿಕೊಳ್ಳಬೇಕು. ಗುಟ್ಕಾ, ಮದ್ಯ ಸೇವನೆ, ಜೂಜಾಟಕ್ಕೆ ಬಲಿಯಾಗಬಾರದು. ತಂದೆ-ತಾಯಿಕಷ್ಟಪಟ್ಟು ಮಕ್ಕಳ ಉತ್ತಮ ಭವಿಷ್ಯಕ್ಕಾಗಿಕಷ್ಟಪಡುತ್ತಾರೆ. ಅವರ ಶ್ರಮಕ್ಕೆ ಬೆಲೆಕೊಟ್ಟುಅಭ್ಯಾಸದಲ್ಲಿ ನಿರತರಾಗಬೇಕು. ಎಲ್ಲರೂ ಸಚಿವ, ದೊಡ್ಡಅಧಿಕಾರಿ ಆಗಲು ಸಾಧ್ಯವಿಲ್ಲ. ಆದರೆ ಸರಿಯಾದ ಮಾರ್ಗದಲ್ಲಿಏನಾದರೂ ಸಾಧಿಸಬೇಕುಎಂದು ಕಿವಿಮಾತು ಹೇಳಿದರು.
ನಂತರ ಬ್ಯಾಂಕ್‍ಆಫ್ ಬರೋಡಾ ವ್ಯವಸ್ಥಾಪಕ ನಾಗೇಂದ್ರ ಮಾತನಾಡಿ, ವಿದ್ಯಾರ್ಥಿಜೀವನದಿಂದಲೇ ಉಳಿತಾಯ ಮನೋಭಾವ ಬೆಳೆಸಿಕೊಳ್ಳಬೇಕು. ಈಗಿನಿಂದಲೇ ಆ ಪ್ರವೃತ್ತಿ ಅಳವಡಿಸಿಕೊಂಡರೆ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಸಮಯಅನ್ನುವುದುತುಂಬಾ ಮುಖ್ಯವಾಗುತ್ತದೆ. ಒಂದು ನಿಮಿಷವನ್ನೂ ನಿಷ್ಪಯೋಜಕವಾಗಿ ಕಳೆಯಬಾರದು. ಟಿವಿ, ಮೊಬೈಲ್ ವೀಕ್ಷಣೆಕಡೆಗೆ ಗಮನ ಕಡಿಮೆ ಮಾಡಬೇಕು. ಪರೀಕ್ಷೆಯನ್ನುಆತ್ಮಸ್ಥೈರ್ಯದಿಂದ ಎದುರಿಸಿ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಶಾಲೆಯಉಪಪ್ರಾಂಶುಪಾಲರಾದ ನಾಗರತ್ನ.ಎಸ್, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್‍ರಾಜ್, ಶಿಕ್ಷಕರಾದ ಸುಧಾಕರ್, ಶೈಲಜಾ, ಹಾಜರಿದ್ದರು.