ರಟಕಲ್ ಆರೋಗ್ಯ ಕೇಂದ್ರದ ನರ್ಸ್‍ಗೆ ಸೂಕ್ತ ರಕ್ಷಣೆ ನೀಡಲು ಮನವಿ
ಕಲಬುರಗಿ,ಫೆ.29- ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಪಿ.ಎಚ್.ಸಿ. ಆರೋಗ್ಯ ಕೇಂದ್ರದ ನರ್ಸ ಆಗಿ ಕಳೆದ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಶ್ವಿನಿ ಅವರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಯುನೈಟೆಡ್ ಕ್ರಿಶ್ಚಿಯನ್ ಸಂಘಟನೆ ಜಿಲ್ಲಾ ರಕ್ಷಣಾಧಿಕಾರಿ ಎಸ್‍ಪಿ ಕಚೇರಿ ಎದುರು ಪ್ರತಿಭಟನೆಯ ಮೂಲಕ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದೆ.
ನರ್ಸ್ ಅಶ್ವಿನಿ ಅವರು, ಬಾಡಿಗೆ ಮನೆಯಲ್ಲಿ ಇದ್ದರು. ಇತ್ತೀಚಿಗೆ ಆಕೆಯ ಮೇಲಾಧಿಕಾರಿಗಳು ಅಶ್ವಿನಿಗೆ ವಾಸ ಮಾಡಲು ಪಿ.ಎಚ್.ಸಿ ಆರೋಗ್ಯ ಕೇಂದ್ರದ ವಸತಿ ನಿಲಯ ನೀಡಿದರು. ಅಶ್ವಿನಿ (ಕ್ರೈಸ್ತ) ಕ್ರಿಸ್ತನಲ್ಲಿ ನಂಬಿಕೆ ಇಟ್ಟಿರುವ ಕಾರಣ ಪ್ರಾರ್ಥನೆ ಮಾಡಿಸಿ ಗೃಹ ಪ್ರವೇಶ ಮಾಡುತ್ತಿರುವಾಗ, ಗ್ರಾಮದ ಶಂಕರ್ ಚೌಕಾ ತನ್ನ ಗುಂಪು ಕಟ್ಟಿಕೊಂಡು ಪ್ರಾರ್ಥನೆ ನಡೆಯುತ್ತಿರುವ ನಿವಾಸದಲ್ಲಿ ಒತ್ತಾಯಪೂರ್ವಕವಾಗಿ ಪ್ರವೇಶ ಮಾಡಿ ಮತಾಂತರ ಮಾಡುತ್ತಿದ್ದಾರೆಂದು ಸುಳ್ಳು ಅಪಾದನೆ ಮಾಡಿ ಅಶ್ವಿನಿಯನ್ನು ಎಳೆದಾಡಿ ಜಾತಿಯಿಂದ ನಿಂದಿಸಿ ರೌಡಿಸಂ ಮೆರೆದಿದ್ದಾನೆ.
ಶಂಕರ ಚೌಕಾ ಹಾಗು ಸಂಗಡಿಗರ ಮೇಲೆ ಸುಲೇಪೇಠ ಸರ್ಕಲ ಅವರಿಂದ ಅಪರಾಧ ಸಂಖ್ಯೆ: 08/24 ಅಟೊಟ ಕಲಂ ದಾಖಲಾಗಿದೆ. ಚೌಕಾ ಹಾಗೂ ಸಂಗಡಿಗರನ್ನು ಬಂಧಿಸದ ಕಾರಣ ಸಂತ್ರಸ್ತೆ ಅಶ್ವಿನಿಯನ್ನು ಅನೇಕ ಜನರ ಮುಖಾಂತರ ಕೇಸ್ ವಾಪಸ್ ಪಡೆಯಲು ಬೆದರಿಕೆ ಧಮಕಿ ಹಾಕಿಸುತ್ತಾ ಇದ್ದಾರೆ.
ಗುಂಡಗಳ ಬೆದಿಕೆಯ ಹಿನ್ನಲೆಯಲ್ಲಿ ಅಶ್ವಿನಿ ಅವರು, ಸೇವೆಗೆ ಬರುತ್ತಿಲ್ಲಾ, ಅಶ್ವಿನಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ದೌಜನ್ಯ ಎಸಗಿರುವ ಶಂಕರ ಚೌಕಾ ಹಾಗೂ ಸಂಗಡಿಗರನ್ನು ತಕ್ಷಣ ಬಂಧಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಲೂಯಿಸ ಕೋರಿ ಸೇರಿದಂತೆ ಸಂಘಟನೆಯ ಪ್ರಮುಖರು, ಕಾರ್ಯಕರ್ತರು, ಕ್ರೈಸ್ತ ಅಭಿಮಾನಿಗಳು ಭಾಗವಹಿಸಿದ್ದರು.