ದೇವೇಂದ್ರಪ್ಪ, ಮರೀಗೌಡ, ಬಸವರಾಜಗೆ ನಿಗಮ ಮಂಡಳಿ ಭಾಗ್ಯ
ಕಲಬುರಗಿ,ಫೆ.29-ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ದೇವಿಂದ್ರಪ್ಪ ಮರ್ತೂರ್, ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಮರೀಗೌಡ ಯಾದಗಿರಿ ಮತ್ತು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಸವರಾಜ ಜಾಬಶೆಟ್ಟಿ ಸೇರಿದಂತೆ 44 ಜನರನ್ನು ವಿವಿಧ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.