ಜೂಜಾಟ: ಐವರ ಬಂಧನ
ಕಲಬುರಗಿ,ಫೆ.29-ಬಾಪುನಗರ ಏರಿಯಾದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆ ಪಿಎಸ್‍ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ಲವ ಬಿದರಣಿಕರ, ನಾಗರಾಜ ಸಂಕರಡಗಿ, ಲಕ್ಕಪ್ಪಾ ಸರಡಗಿ, ಲೋಹಿತ್ ಹೊನಗುಂಟಿ, ಹಣಮಂತ ಭಂಕೂರ ಎಂಬುವವರನ್ನು ಬಂಧಿಸಿ 4470 ರೂ.ನಗದು, 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.