ಕಲಬುರಗಿ,ಯಾದಗಿರಿ: 331 ದಾಖಲೆರಹಿತ ಕಂದಾಯ ಗ್ರಾಮ
ಕಲಬುರಗಿ,ಫೆ.29: ಭೂದಾಖಲೆಗಳ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 1,115 ,ಯಾದಗಿರಿ ಜಿಲ್ಲೆಯಲ್ಲಿ 597 ಕಂದಾಯ ಗ್ರಾಮಗಳಿವೆ.ಕಲಬುರಗಿ ಜಿಲ್ಲೆಯಲ್ಲಿ 319 ,ಯಾದಗಿರಿ ಜಿಲ್ಲೆಯಲ್ಲಿ 12 ದಾಖಲೆರಹಿತ ಕಂದಾಯ ಗ್ರಾಮಗಳಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಸದನದಲ್ಲಿ ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.ಕಲಬುರಗಿ ಜಿಲ್ಲೆಯ 1,115 ಗ್ರಾಮಗಳ ಪೈಕಿ 460 ಗ್ರಾಮಗಳಲ್ಲಿ 56,247 ಏಕಮಾಲೀಕತ್ವದ ಪಹಣಿಗಳನ್ನು ಸೃಜಿಸಲಾಗಿದೆ.ಇನ್ನು 518 ಗ್ರಾಮಗಳು ಪೋಡಿಮುಕ್ತ ಗ್ರಾಮ ಯೋಜನೆಯಡಿ ಅಳತೆ ಮಾಡಲು ಬಾಕಿಯಿರುತ್ತದೆ.ಯಾದಗಿರಿ ಜಿಲ್ಲೆಯ 597 ಗ್ರಾಮಗಳ ಪೈಕಿ 210 ಗ್ರಾಮಗಳಲ್ಲಿ 32.611 ಏಕ ಮಾಲೀಕತ್ವದ ಪಹಣಿಗಳನ್ನು ಸೃಜಿಸಲಾಗಿದೆ.ಇನ್ನು 387 ಗ್ರಾಮಗಳು ಪೋಡಿಮುಕ್ತ ಗ್ರಾಮ ಯೋಜನೆಯಡಿ ಅಳತೆ ಮಾಡಲು ಬಾಕಿಯಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.