ಒಂದೇ ದಿನ ಐದು ಕಡೆ ಕಳ್ಳತನ: ಪ್ರಕರಣ ದಾಖಲು
ಚಿತ್ತಾಪೂರ: ಫೆ.29:ಒಂದೇ ದಿನ ಐದು ಕಡೆ ಕಳ್ಳತನವಾಗಿದ್ದು ಅದರಲ್ಲಿ ಸಾವಿರಾರು ರುಪಾಯಿ ದೋಚಿದ ಘಟನೆ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದ ಮುಂದೆ ಇರುವ ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದ ಮಾಳಿಗೆಗಳಾದ ಸಹರ ಇಂಟರ್ನೆಟ್, ಅಲ್ಲಾ ಬಕಸ್, ಗಂಗಾ ಮೆಡಿಕಲ್, ಹಾಗೂ ತಾಲೂಕು ಪಂಚಾಯತ್ ಕಛೇರಿ ಕಡೆ ನಿಲ್ಲಿಸಿ ವಾಹನ ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಟ್ರಸ್ಟ್ ಸಂಬಂಧಿಸಿದ ಸಂಚಾರಿ ವಿಜ್ಞಾನ ಪ್ರಯೋಗಾಲಯದ ವಾಹನದ ಡೋರ್ ಮುರಿದು ಒಳ ಹೊಕ್ಕಿ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳು ಚೆಲ್ಲಾಪಿಲ್ಲಿ ಮಾಡಿ, ಪಕ್ಕದಲ್ಲಿ ಐರಾನ್ ಮಾಡುವ ಅಂಗಡಿ ಬಿಗ್ ಮುರಿದು ಪರಾರಿಯಾಗಿದ್ದಾರೆ. ಇವುಗಳಲ್ಲಿ ಒಂದಾದ ಸಹರ ಇಂಟರ್ನೆಟ್, ನಲ್ಲಿ ಮಾತ್ರ ಹತ್ತು ಸಾವಿರ ರೂಪಾಯಿಗಳು ಕಳುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಳಿದ ಶಾಪ್ ಗಳಲ್ಲಿ ಬೀಗ ಮುರಿದ ಘಟನೆಗಳು ಕಂಡುಬಂದಿವೆ.
ಇದಕ್ಕೂ ಮುಂಚೆ ಪಟ್ಟಣದಲ್ಲಿ ಒಂದು ತಿಂಗಳ ಹಿಂದೆ ಬಾಲಕಿಯ ಪ್ರೌಢ ಶಾಲೆಯ ಮುಂದಿನ ನರೆಂದ್ರ ಅವರ ಅಂಗಡಿ ಕಳುವಾಗಿ ಸಾವಿರಾರು ರುಪಾಯಿ ದೋಚಿದ ಪರಾರಿಯಾದ ಘಟನೆ ನಡೆದಿತ್ತು. ಈಗ ಮತ್ತೆ ಪಟ್ಟಣದಲ್ಲಿ ಪದೇ ಪದೇ ಕಳ್ಳತನಗಳು ಆಗುತ್ತಿದ್ದು ಸಾರ್ವಜನಿಕರಲ್ಲಿ ಅಂಗಡಿ ಮಾಲೀಕರಲ್ಲಿ ಭಯದ ವಾತಾವರಣ ಉಂಟಾಗಿದೆ ಇದರಿಂದ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಇನ್ನೂಂದು ಕಡೆ ಪೆÇೀಲಿಸ್ ಇಲಾಖೆ ರಾತ್ರಿ ಹೊತ್ತು ನಿಷ್ಕಾಳಜಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ರಾಜಾರೋಷವಾಗಿ ಮರಳು ದಂಧೆ ನಡೆಯುತ್ತಿದೆ, ಅದು ಅಲ್ಲಾದೆ ರಾತ್ರಿ ಹೊತ್ತು ಸಾಕಷ್ಟು ಅಂಗಡಿಗಳು ತೆರೆದಿರುತ್ತಾವೆ, ಅಷ್ಟೇ ಏಕೆ ಬಸ್ ಡಿಪೆÇೀ ಹತ್ತಿರದ ಆಸೀಮ್ ಧಾಬಾ ರಾತ್ರಿ ಹೊತ್ತು ತೆರೆದೆ ಇರುತ್ತದೆ. ಇವಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳಿಗೆ ವಿಫಲರಾಗಿದ್ದಾರೆ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಕಳ್ಳತನಕ್ಕೆ ಸಂಬಂಧಿಸಿದಂತೆ ಹೀಗಾಗಲೇ ಸಹಾರ್ ಇಂಟರ್ನೆಟ್ ಅವರಿಂದ ಒಂದು ಪ್ರಕರಣ ದಾಖಲಾಗಿದೆ. ಸಿಸಿ ಟಿವಿಯಲ್ಲಿ ಆರೋಪಿಯ ದೃಶ್ಯ ಸೇರೆಸಿಕ್ಕೆದೆ ಈ ಕುರಿತು ಪೆÇೀಲಿಸ್ ಇಲಾಖೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.