ರಾಮಲಿಂಗೇಶ್ವರ ದೇವಸ್ಥಾನದ ಸಂರಕ್ಷಣೆ , ಜಿರ್ಣೋದ್ಧಾರಕ್ಕೆ ರೂ. 2.50 ಕೋಟಿ ಅನುದಾನ
ಬೀದರ:ಫೆ.29:ಭಾರತೀಯ ಪುರತತ್ವ ಇಲಾಖೆಯಿಂದ ಬೀದರ ತಾಲೂಕಿನ ಬನ್ನಳ್ಳಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಸಂರಕ್ಷಣೆ ಹಾಗೂ ಜಿರ್ಣೋದ್ಧಾರಕ್ಕೆ ರೂ. 2.50 ಕೋಟಿ ಅನುದಾನ ಮಂಜೂರಾತಿಯಾಗಿದೆ ಎಂದು ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.