ಮನೆಗಳ ಹಂಚಿಕೆ ಅಕ್ರಮ: ತನಿಖೆಗೆ ಆಗ್ರಹ
ಆಲಮೇಲ:ಫೆ.29: ಪಟ್ಟಣ ಪಂಚಾಯತಿಯಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಯೋಜನೆ ಅಡಿಯಲ್ಲಿ 2021-22ರ ಮತ್ತು 2022-2023 ವರೆಗೆ ಹಂಚಿಕೆಯಾದ 354 ಫಲಾನುಭವಿಗಳಲ್ಲಿ ಅರ್ಧಕ್ಕೂ ಹೆಚ್ಚು ಫಲಾನುಭವಿಗಳು ಆಲಮೇಲದ ರಹÀವಾಸಿಗಳಲ್ಲದವರು ಅವರ ಆರ್ಧಾಕಾರ್ಡನ್ನು ಆಲಮೇಲದಲ್ಲಿ ಇದ್ದವೆ ಎಂದು ನಮೂದಿಸಿ ಅಕ್ರಮವಾಗಿ ಮನೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ಸಿಂದಗಿ ತಾಲೂಕ ಅಧ್ಯಕ್ಷ ಶಿವುಕುಮಾರ ಮೇಲಿನಮನಿ ಆರೋಪಿಸಿದ್ದಾರೆ.
ಅವರು ಆಲಮೇಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.
ಅಕ್ರಮವಾಗಿ ಮನೆಗಳ ಹಂಚಿಕೆಮಾಡಿರುವ ನಿಗಮದ ಅಧಿಕಾರಿಗಳು ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು ಅವರ ಮೇಲೆ ಸೂಕ್ತ ಕಾನೂನಿನ ಕ್ರಮ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಆಲಮೇಲದಲ್ಲಿ ಫಲಾನುಭವಿಗಳ ಹೆಸರು ಆಲಮೇಲದಲ್ಲಿ ವಾಸ್ತವ್ಯ ಇಲ್ಲದಿದ್ದರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ್ದಾರೆ ಇವರನ್ನು ಹಾಗೂ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಧರಣಿ ಸ್ಯಾಗ್ರಹ ಮಾಡುವದಾಗಿ ತಿಳಿಸಿದರು. ಅಲ್ಲದೆ ಆಲಮೇಲ ಪಟ್ಟಣದಲ್ಲಿ ಈ ಹಿಂದಿನ ವರ್ಷಗಳಲ್ಲಿ ನಡೆದ ಸುಲಭ ಶೌಚಾಲಯ ನಿರ್ಮಾಣ ಮತ್ತು ಪಟ್ಟಣದಲ್ಲಿ ನಾಲ್ಕು ಕಡೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ ಅವುಗಳು ಪ್ರಯೋಜನಕ್ಕೆ ಬಾರದಂತಾಗಿದೆ ಇವುಗಳು ಯಾವು ಕಾರ್ಯ ನಿರ್ವಹಿಸುತ್ತಿಲ್ಲ ಇಲ್ಲಿಯು ಪಟ್ಟಣ ಪಂಚಾಯತಿಯಿಂದ ಅಕ್ರಮವಾಗಿ ಬಿಲ್ ಮಾಡಿಕೊಂಡು ವಂಚಿಸಿರುವದು ಮೇಲನೋಟಕ್ಕೆ ಗೊತ್ತಾಗುತ್ತದೆ ಇತರೆ ಕಾಮಗಾರಿಗಲ್ಲಿ ಅಕ್ರಮ ನಡೆದಿದ್ದು ಇವು ಎಲ್ಲವುಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಪ್ರತಿಕಾ ಗೋಷ್ಠಿಯಲ್ಲಿ ದಲಿತ ಸಂಘರ್µ ಸಮಿತಿಯ (ಅಂಬೇಡ್ಕರವಾದ) ಸಿಂದಗಿ ತಾಲೂಕ ಸಂಘಟನಾ ಸಂಚಾಲಕ ಶಶೀಧರ ನಾಯ್ಕೋಡಿ ಸಂಘಟನೆಯ ಪ್ರಮುಖರಾದ ರಾಜು ದೊಡ್ಡಮನಿ ಸಂಜು ಮೇಲಿನಮನಿ ಉಪಸ್ಥತಿರಿದ್ದರು