ಖಾಸ್ಗತ ಮಠಕ್ಕೆ ಅಟವಿ ಶ್ರೀಗಳ ಬೆಟ್ಟಿ
ತಾಳಿಕೋಟೆ:ಫೆ.29: ಇತ್ತೀಚಗೆ ಲಿಂಗೈಕ್ಯರಾದ ಸಂಗಯ್ಯ ವಿರಕ್ತಮಠ ಅವರ ವಿಷಯ ಅರೀತ ಅಟವಿಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಶ್ರೀ ಖಾಸ್ಗತೇಶ್ವರ ಮಠಕ್ಕೆ ಬುಧವಾರರಂದು ಬೆಟ್ಟಿ ನೀಡಿದರಲ್ಲದೇ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರುಗಳಿಗೆ, ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರೊಂದಿಗೆ ಘಂಟೆಕಾಲ ಚರ್ಚಿಸಿದರಲ್ಲದೇ ಯುವ ವಯಸ್ಸಿನಲ್ಲಿಯೇ ಆರೋಗ್ಯವಂತರಾಗಿದ್ದ ಸಂಗಯ್ಯ ವಿರಕ್ತಮಠ ಅವರು ಸ್ವರ್ಗಸ್ಥರಾಗಿರುವದು ವಿಚಿತ್ರ ವೆನಿಸುತ್ತದೆ ಎಂದ ಅವರು ಲಿಂ.ಸಂಗಯ್ಯ ನವರ ಬಳಿ ಇದ್ದ ಆತ್ಮೀಯ ಭಾವನೆಗಳ ಬಗ್ಗೆ ಭಕ್ತರೊಂದಿಗೆ ಇದ್ದ ಅವರ ಒಳ್ಳೆಯ ಒಡನಾಟ, ಅವರ ಪ್ರೀತಿ ಪ್ರೇಮಗಳ ಕುರಿತು ಶ್ರೀಗಳು ಬಣ್ಣಿಸಿದರು.
ಈ ಸಮಯದಲ್ಲಿ ಔಷಧ ವ್ಯಾಪಾರಸ್ಥರಾದ ರಮೇಶ ಸಾಲಂಕಿ ಹಾಗೂ ಶ್ರೀಮತಿ ಅಕ್ಕಮಹಾದೇವಿ ವಿರಕ್ತಮಠ, ಶರಣಯ್ಯ ಹಿರೇಮಠ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಅವರು ಉಪಸ್ಥಿತರಿದ್ದರು.