ವಸ್ತುಗಳ ಪ್ರದರ್ಶನದಿಂದ ಮಕ್ಕಳ ಪ್ರತಿಭೆ ಅನಾವರಣ:ಹಿರೇಮಠ
ತಾಳಿಕೋಟೆ:ಫೆ.29: ವಿಜ್ಞಾನ ಕ್ಷೇತ್ರದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಳಿಕೋಟೆಯ ಎಸ್.ಕೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ಪಾತ್ರ ಮೆಚ್ಚುವಂತಹದ್ದಾಗಿದೆ ಎಂದು ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ನುಡಿದರು.
ಬುಧವಾರರಂದು ಸ್ಥಳೀಯ ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಕಲಾ ಮತ್ತು ವಿಜ್ಞಾನ ಮಾದರಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ನಮ್ಮ ಭಾರತ ದೇಶದಲ್ಲಿ ಅನೇಕ ವಿಜ್ಞಾನಿಗಳು ತಮ್ಮಲ್ಲಿಯ ವಿಜ್ಞಾನದ ಕಲೆಯನ್ನು ಬಿತ್ತರಿಸಿ ಭಾರತ ದೇಶ ಯಾವದಕ್ಕೂ ಕಡಿಮೆ ಇಲ್ಲಾವೆಂಬುದನ್ನು ಅನ್ಯ ದೇಶಿಕರಿಗೆ ತೋರಿಸಿಕೊಟ್ಟಿದ್ದಾರೆಂದರು. ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ ಸ್ಪರ್ದಾತ್ಮಕ ಯುಗದಲ್ಲಿ ಅಕ್ಷರ ಅಭ್ಯಾಸದ ಜೊತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಾ ಸಾಗಿದೆ ಅದರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ವಿಜ್ಞಾನದ ಶಿಕ್ಷಣ ಕುರಿತು ಅಬಿರುಚಿ ಬೆಳೆಸುವದು ಅತ್ಯವಶ್ಯಕವಾಗಿದೆ ಈ ನಿಟ್ಟಿನಲ್ಲಿ ಆಯೋಜಿಸಲಾದ ಇಂದಿನ ವಸ್ತು ಪ್ರದರ್ಶನಗಳನ್ನು ನೋಡಿದರೆ ಮಕ್ಕಳ ಪ್ರತಿಭೆಗೆ ಅನಾವರಣಕ್ಕೆ ಅನುಕೂಲವಾಗಲಿದೆ ಎಂದರು.
ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂದಿತ ಪರಮಾಣುಕ್ಕೆ ಸಂಬಂದಿಸಿದ್ದ ರಚನೆ ಪರಿಸರ ಮಾಲಿನ್ಯ ನಿಯಂತ್ರಣ, ಸ್ವಯಂ ಚಾಲಿತ ಚಂದ್ರಯಾನ 3, ಸ್ವಾಸಕ್ರೀಯೇ ಕುರಿತು ಸಾವಯವ ಕೃಷಿ ಕುರಿತು, ಜಲ ಚಕ್ರ, ಆಗೂ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಒಳಗೊಂಡ ನಾನಾ ಬಗೆಯ 1ನೇ ತರಗತಿಯಿಂದ 9 ನೇ ತರಗತಿಯವರೆಗಿನ ವಿದ್ಯಾರ್ಥಿನಿಯರು ಪ್ರದರ್ಶನ ನೀಡಿದ್ದು ಆಕರ್ಷಮಯವಾಗಿದ್ದವು.
ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಅವರು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕ, ಶಿಕ್ಷಕಿಯರ ಸೇವಾ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಪ್ರೋಜೇಕ್ಟರ್ ಮುಖಾಂತರ ಸೂರ್ಯನ ಸುತ್ತ ತಿರುಗುವ ಗ್ರಹಗಳು ಅವುಗಳ ಆದಾರ ಬ್ಯಾರಿ ಶೆಂಟರ್ ಕುರಿತು ವಿಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಈ ಸಮಯದಲ್ಲಿ ಎಸ್.ಕೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಅಧ್ಯಕ್ಷ ವೇ.ಮುರುಘೇಶ ವಿರಕ್ತಮಠ, ವೀ.ವಿ.ಸಂಘದ ನಿರ್ದೇಶಕರಾದ ರಮೇಶ ಸಾಲಂಕಿ, ಆಡಳಿತ ಮಂಡಳಿಯ ಸದಸ್ಯ ಸಂತೋಷ ಮುರಾಳ, ಶಾಲಾ ಆಡಳಿತ ಅಧಿಕಾರಿ ಎಸ್.ಎ.ಶರಣರ, ಮುಖ್ಯಗುರುಗಳಾದ ಶ್ರೀಮತಿ ಲಕ್ಷ್ಮೀ ಮಣೂರ, ಗೀತಾ ಹಿರೇಮಠ, ಹಾಗೂ ಶಿಕ್ಷಕ, ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದರು.