ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಪೀಠದ ಕಾರ್ಯರಂಭಕ್ಕೆ ಮನವಿ
ಕಲಬುರಗಿ: ಫೆ.29:ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರ್ಗಿಯಲ್ಲಿ ಮಂಜೂರಾಗಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಪೀಠದ ಕಾರ್ಯರಂಭಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗಾಗಿ ಕೂಡಲೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿ ಪಿಠದ ಕಾರ್ಯಾರಂಭ ಮಾಡುವಂತೆ ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ ಅವರ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಅಧ್ಯಕ್ಷರಾದ ಮಾಲತಿ ರೇಷ್ಮಿ, ಸದಸ್ಯರಾದ ಲೋಕೇಶ್, ಸಾಹಯಕ ಆಡಳಿತ ಅಧಿಕಾರಿಯಾದ ಮಲ್ಲಿಕಾರ್ಜುನ ವಡೆಯರ, ಗುಲಬರ್ಗಾ ವಕಿಲರರ ಸಂಘದ ಉಪಾಧ್ಯಕ್ಷರಾದ ಧರ್ಮಣ್ಣ ಜೈನಪುರ, ಜೈಶಿಲಾ ಬೊದಲೆ, ಕಾರ್ಯದರ್ಶಿಗಳಾದ ಬಸವರಾಜ ನಾಶಿ, ಜಂಟಿ ಕಾರ್ಯದರ್ಶಿಗಳಾದ ಎಸ್ ಕೆ. ಚಿಕ್ಕಳ್ಳಿ, ಖಜಾಂಚಿ ಗಳಾದ ಶಿವರಾಜ ಪಾಟೀಲ ಹಾಗೂ ಮಹಾತ್ಮ ಗಾಂಧಿಜಿ ಗ್ರಾಹಕರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿಗಳಾದ ವೈಜನಾಥ ಎಸ್ ಝಳಕಿ ಅವರು ಉಪಸ್ಥಿತರಿದ್ದರು.