ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯುವಂತೆ ಆಂದೋಲ ಶ್ರೀಗಳಿಂದ ಪ್ರತಿಭಟನೆ
ಕಾಳಗಿ.ಫೆ.29 : ತಾಲೂಕಿನ ರಟಕಲ ಗ್ರಾಮದಲ್ಲಿ ಕಳೆದ ಗುರುವಾರ ಸಂಜೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗ್ರಹಗಳಲ್ಲಿ ಕ್ರೈಸ್ತ ಧರ್ಮದವರು, ಬೈಬಲ್ ಪಠಿಸುತ್ತಾ, ಭಜನೆ, ಸ್ತೋತ್ರ, ಏಸುವಿನ ಆರಾಧನೆಯೊಂದಿಗೆ ಅನ್ಯ ಧರ್ಮದ ವ್ಯಕ್ತಿಗಳನ್ನೂ ಕೂಡ ಕರೆದುಕೊಂಡು ಅವರಿಗೆ ಹಣದ ಆಮಿಷವೊಡ್ಡಿ ಒತ್ತಾಯ ಪೂರ್ವಕವಾಗಿ ಮುಂತಾಂತರ ಕಾರ್ಯಕ್ಕೆ ಕೈಹಾಕಿ ಗ್ರಾಮದಲ್ಲಿ ಕೋಮು ಗಲಭೆಯ ಬೆಂಕಿಯನ್ನು ಹಚ್ಚುತ್ತಿದ್ದಾರೆಂದು ತಾಲೂಕು ಹಿಂದೂ ಜಾಗೃತಿ ಸೇನೆ ಖಂಡಿಸಿತು.
ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ವಸತಿ ಗ್ರಹಗಳಲ್ಲಿ ಧರ್ಮ ಭೋದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ 9ಜನ ಹಿಂದೂ ಸಂಘಟನಾಕಾರರ ಮೇಲೆ ಸರ್ಕಾರದ ಒತ್ತಡಕ್ಕೆ ಮಣಿದ ಸ್ಥಳೀಯ ಪೆÇಲೀಸರು, ಇಬ್ಬರು ನರ್ಸ್ ಗಳು ನೀಡಿರುವ ದೂರಿನ ಮೆರೆಗೆ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದರು.
ಕಾನೂನು ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧರ್ಮಭೋದನೆ ಮಾಡುವ ನೆಪದಲ್ಲಿ ಒತ್ತಾಯ ಪೂರ್ವಕವಾಗಿ ಮತಾಂತರ ಕಾರ್ಯಕ್ಕೆ ಕೈ ಹಾಕುತ್ತಿರುವುದನ್ನು ಖಂಡಿಸಿ ನೀಡಿರುವ ದೂರನ್ನು ಪೆÇೀಲಿಸರು ಲೆಕ್ಕಕ್ಕೆ ತೆಗೆದುಕೊಳ್ಳದೆ ಇರುವುದರಿಂದ ರೊಚ್ಚಿಗೆದ್ದ ಕಲಬುರಗಿ ಜಿಲ್ಲಾ ಹಿಂದೂ ಸಂಘಟನಾಕಾರರು ಹಾಗೂ ರಟಕಲ್ ಗ್ರಾಮದ ನಾಗರಿಕರು ಸೇರಿಕೊಂಡು ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಬುಧವಾರ ರಟಕಲ್ ಪೆÇೀಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಮುಂದಾದರು.
ಠಾಣೆಯ ಮುಂದೆ ಪ್ರತಿಭಟನೆಗೆ ಅವಕಾಶ ನೀಡದ ಪೆÇೀಲಿಸ್ ಇಲಾಖೆ ಹಾಗೂ ಸರಕಾರದ ವಿರುದ್ಧ ಜಯಘೋಷಗಳನ್ನಿಕ್ಕುತ್ತಾ ಚಿಂಚೋಳಿ -ಮಹಾಗಾಂವ ಮಧ್ಯದ ರಟಕಲ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕುಳಿತು ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆಂದೋಲ ಶ್ರೀಗಳು, ಹಿಂದೂಗಳನ್ನು ಹತ್ತಿಕ್ಕುವ ಕೆಲಸ ನಾಲ್ಕು ನೂರು ವರ್ಷಗಳ ಹಿಂದಿನಿಂದಲೂ ಬಂದಿದೆ. ಆದರೂ ಕೂಡ ಸತ್ಯಕ್ಕೆ ಜಯವಾಗಿದೆ.
ಇಗಲೂ ಕೂಡ ಕಾಂಗ್ರೇಸ್ ಪಕ್ಷಕ್ಕೆ ಬುದ್ಧಿ ಬಂದಂತೆ ಕಾಣದಾಗಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಓಲೈಕೆ ರಾಜಕಾರಣಕ್ಕಾಗಿ ತಮ್ಮ ತನವನ್ನೇ ಬಿಟ್ಟು ಕೊಡುವುದು ಲಜ್ಜಗೇಡಿ ರಾಜಕೀಯವಾಗಿದೆ.
ಸತ್ಯವನ್ನೇ ಮರೆಮಾಚಿ ಸುಳ್ಳುನ್ನೇ ಸಮರ್ಥನೆ ಮಾಡಿಕೊಂಡು, ಪುಟ್ಟ ರಟಕಲ್ ಗ್ರಾಮದ 9ಜನ ಹಿಂದೂ ಸಂಘಟನಾಕಾರರ ಮೇಲೆ ಸುಳ್ಳು ಜಾತಿನಿಂದನೆ ಕೇಸ್ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಘೋರ ಅಪಮಾನವಾಗಿದೆ.
ಮಾತೆತ್ತಿದರೆ ಅಂಬೇಡ್ಕರ್ ಸಂವಿಧಾನದ ಶಿಕ್ಷೆ ತೋರಿಸುತ್ತೇನೆ ಎಂದು ಬೀಗುವ ಕಲಬುರಗಿ ಮಹಾ ಮಂತ್ರಿಗಳು, ಆ ಸಂಘಟನೆ, ಈ ಸಂಘಟನೆ ಎಂದು ಹೆಳಿಕೊಂಡು ಬರುವವರನ್ನು ಒದ್ದು ಒಳಗೆ ಹಾಕಿ ಎಂದು ತೋರಿಸುವ ತಮ್ಮ ಅಧಿಕಾರದ ದರ್ಪ ಬಹಳ ದಿನ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಪ್ರಿಯಾಂಕ ಖರ್ಗೆ ಅವರನ್ನು ಟೀಕಿಸಿದರು.
ಕಲಬುರಗಿಯಲ್ಲಿ ಇತ್ತೀಚೆಗೆ ಬೆರೆ-ಬೆರೆ ಸಂಘಟನೆ ಅವರು, ಪ್ರತಿಭಟನೆ ಮಾಡಿ ಅಮಾಯಕರಿಗೆ ತೊಂದರೆ ಕೊಟ್ಟು ಸಾರ್ವಜನಿಕರ ಆಸ್ತಿ -ಪಾಸ್ತಿ ಹಾಳಾಯಿತು. ಆಗ ಎಲ್ಲಿ ಹೋಗಿತ್ತು ನಿಮ್ಮ ಪೌರುಷ.
ಹಿಂದೂ ಸಂಘಟನೆಗಳು ಸಂವಿಧಾನ ಬದ್ಧವಾಗಿ ಹೋರಾಟಕ್ಕಿಳಿದರೆ ಮಾತ್ರ ಒದ್ದು ಒಳಗೆ ಹಾಕಬೇಕು. ಅದೆನಾ ತಾವು ಅರ್ಥೈಸಿಕೊಂಡ ಸಂವಿಧಾನ. ಎಂದು ಪ್ರಶ್ನಿಸಿದರು.
“ಅನ್ನ ತಿಂದ ಮನೆಗೆ ಕನ್ನ ಹಾಕುವ ಕೈಗಳ ಹಿಂದೆ ಕಾಂಗ್ರೆಸ್ ನಿಂತಿದೆ”
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ವರ್ಷದಲ್ಲಿಯೇ ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಅಷ್ಟೇ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೆಳಿಸತೊಡಗಿದ್ದವು. ಆದರೆ ವಿಧಾನ ಸೌಧದಲ್ಲೂ ರಾಜಾರೋಷವಾಗಿ “ಪಾಕಿಸ್ತಾನ ಜಿಂದಾಬಾದ್” ಎಂಬ ಜಯಘೋಷಗಳನ್ನಿಕ್ಕುತ್ತಾ ದುಷ್ಟಶಕ್ತಿಗಳು ಹೊರಟಿವೆ. ಕಾಂಗ್ರೆಸ್ ಕಿವುಡರಂತೆ ಕುಳಿತಿರುವುದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಅಧಿಕಾರಕ್ಕಾಗಿ ತನ್ನ ತಾಯ್ನಾಡಿಗೆ ಹಾಗೂ ದೇಶಕ್ಕೆ ಮಾಡುವ ಅಪಮಾನವನ್ನು ಸಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಬರುವ ಲೋಕಾಸಭಾ ಚುನಾವಣೆಯಲ್ಲಿ ಯುವಕರು ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಭಾರತ ದೇಶದ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಖದೀಮರ ಕೈ. ಕಟ್ಟಿಹಾಕುವುದೇ ಮೋದಿ ಕನಸಾಗಿದೆ.
ಕೂಡಲೇ ರಟಕಲ್ ಸರಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಗಳಾಗಿ ಕೆಲಸ ಮಾಡುತ್ತಲೇ ಮತಾಂತರ ಕಾರ್ಯಕ್ಕೆ ಕೈಹಾಕಿರುವ ಇಬ್ಬರನ್ನು ಅಮಾನತು ಮಾಡಬೇಕು.
9ಜನ ಹಿಂದೂ ಸಂಘಟನಾಕಾರರ ಮೇಲೆ ಮಾಡಿರುವ ಸುಳ್ಳು ಜಾತಿ ನಿಂದನೆಯ ಕೇಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಹಿಂದೂ ಜಾಗೃತಿ ಸೇನೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಸೇರಿ ಕಾಳಗಿ ತಾಲೂಕು ಹಿಂದೂ ಸಂಘಟನಾ ಪ್ರತಿನಿಧಿಗಳು ಮಾತನಾಡಿದರು.
ಜಿಲ್ಲಾ ಕುಷ್ಠರೋಗ ನಿವಾರಣಾದಧೀಕಾರಿ ಡಾ.ರಾಜಕುಮಾರ, ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಗೌರಿಗುಡ್ಡ ರಟಕಲ್ ರೇವಣಸಿದ್ದ ಶರಣರು,
ತಾಲೂಕು ವೈದ್ಯಾಧಿಕಾರಿ ಮಹ್ಮದ್ ಗಫೂರ್, ಸುಲೆಪೇಟ ಸಿ.ಪಿ.ಐ ರಾಘವೇಂದ್ರ, ರಾಜಶೇಖರ ಗುಡದಾ, ವಿಜಯಕುಮಾರ ಚೆಂಗಟಿ, ಮಹೇಶ್ ಗೊಬ್ಬರ, ವೈಜನಾಥ ಕುರಕೋಟಿ, ಸಂತೋಷ ಹೆಬ್ಬಾಳ, ಶಿವು ಮುಕರಂಬಿ, ಮುರಿಗೆಪ್ಪ ನಾಗೂರ, ಪ್ರಕಾಶ ಮಹೀಂದ್ರಕರ, ಶರಣು ಬೈರತಿ, ಸುನೀಲ ರಾಜಾಪುರ, ಬಲರಾಮ ವಲ್ಲ್ಯಾಪುರ, ಭೀಮರಾಯ ಮಲಘಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಿಂಚೋಳಿ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ನೂರು ಜನ ಪೆÇೀಲೀಸ್ ಸರ್ಪಗಾವಲು ನೆರವೇರಿಸಲಾಗಿತ್ತು.