ಅಂಗವೈಕಲ್ಯ ಶಾಪವಲ್ಲ ಅದೊಂದು ವರದಾನ
ಬೀದರ್: ಫೆ.29:ಜೀವನದಲ್ಲಿ ನ್ಯೂನ್ಯತೆಗಳಿದ್ದರೆ ಮಾತ್ರ ಏನನ್ನಾದರು ಸಾಧಿಸುವ ಛಲ ಹುಟ್ಟುತ್ತದೆ, ಆದ್ದರಿಂದ
ಅಂಗವೈಕಲ್ಯವು ಶಾಪವಲ್ಲಾ ವರದಾನ ಎಂದು ಭಾವಿಸಿ ಜೀವನದಲ್ಲಿ ಮುಂದೆ ಸಾಗಿ ಉನ್ನತ ಮಟ್ಟಕ್ಕೆ ಏರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪಾ ಕೆ ಕನಕಟ್ಟೆ ಹೇಳಿದರು.
ಅವರು ಬುಧರಾವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ನಡೆದ ವಿಕಲ ಚೇತನ ವ್ಯಕ್ತಿಗಳ ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಪಿ.ಎಂ ದೀಕ್ಷಾ ಡಿಇ ಪಿಡಬ್ಲೂಡಿ ಡಿಜಿಟಲ್ ಟೋಟಲ್ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಸರ್ಕಾರದ ಯೋಜನೆಗಳ ಲಾಭವನ್ನು ಪಡೆದು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಯಾಗಬೇಕೆಂದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಾಗರಾಜ್ ಮಠ ಮಾತನಾಡಿ,ಸಾಕಷ್ಟು ಜನರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಉನ್ನತ ಸಾಧನೆಯನ್ನೂ ಮಾಡಿದ್ದಾರೆ ಅವರಿಂದ ಎಲ್ಲರೂ ಪ್ರೇರಣೆ ಪಡೆದು ಎಲ್ಲರೂ ಸಾಧನೆ ಮಾಡಬೇಕು ಎಂದರು.
ಬೀದರ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಮಾತನಾಡಿ,ಸರ್ಕಾರವು ಅಂಗವಿಕಲರ ಉನ್ನತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಲಾಭವನ್ನು ಎಲ್ಲರೂ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಬಿ.ಎಸ್ ಪಾಟೀಲ್ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹೇಶ ಕುಮಾರ ಶಿವಕುಮಾರ ಪಾಟೀಲ್, ಹುಮನಾಬಾದ ಎಮ್.ಆರ್.ಡಬ್ಲ್ಯೂ, ತಾಪಂ ಸಿಬ್ಬಂದಿಗಳಾದ ರಾಠೋದ ಸತ್ಯಜೀತ ನೀಡೋದಿಕರ, ಜಗನ್ನಾಥ ಗಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.