ಮಾ.3 ರಂದು ಶಹರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ
ಹುಬ್ಬಳ್ಳಿ,ಫೆ29 : ಹುಬ್ಬಳ್ಳಿ ಶಹರ ತಾಲೂಕು 9 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಮಾರ್ಚ್ 3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಂಜಾನೆ 8 ಗಂಟೆಗೆ ಧ್ವಜಾರೋಹಣವನ್ನು ಹು-ಧಾ ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ ಅವರು ನೆರವೇರಿಸಲಿದ್ದು, ಇತರ ಗಣ್ಯರು ಭಾಗವಹಿಸಲಿದ್ದು, ದೇಶಪಾಂಡೆನಗರದ ಪ್ರವಾಸಿ ಮಂದಿರದಿಂದ ನುಡಿ-ನಡಿಗೆ ಮುಂಜಾನೆ 9 ಗಂಟೆಗೆ ಜರುಗಲಿದೆ. ಉಪಮಹಾಪೌರರಾದ ಸತೀಶ್ ಹಾನಗಲ್ ಅವರು ಅಧ್ಯಕ್ಷತೆ ವಹಿಸಲಿದ್ದು, ಪಾಲಿಕೆ ಸದಸ್ಯರಾದ ತಿಪ್ಪಣ್ಣಾ ಮಜ್ಜಗಿ ಚಾಲನೆ ನೀಡಲಿದ್ದಾರೆಂದರು.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಬೆ. 10.30 ಕ್ಕೆ ಜರುಗಲಿದ್ದು, ಶಾಸಕರಾದ ಮಹೇಶ್ ಟೆಂಗಿನಕಾಯಿ ಅಧ್ಯಕ್ಷತೆ, ಉದ್ಘಾಟನೆಯನ್ನು ಹಿರಿಯ ಪತ್ರಕರ್ತರಾದ ಸರಜೂ ಕಾಟ್ಕರ್ ನೆರವೇರಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ್ ಬೆಲ್ಲದ್, ಪ್ರದೀಪ್ ಶೆಟ್ಟರ್, ಪೆÇ್ರ. ಎಸ್.ವಿ.ಸಂಕನೂರ, ಮೇಯರ್ ವೀಣಾ ಬರದ್ವಾಡ, ಹಿರಿಯ ಸಾಹಿತಿಗಳಾದ ಸಿ.ಬಿ.ಮರಿಗೌಡರ ಅತಿಥಿಗಳಾಗಿ ಆಗಮಿಸಲಿದ್ದಾರೆಂದರು.
ಮಧ್ಯಾಹ್ನ 12 ಗಂಟೆಗೆ ಪ್ರಥಮ ಗೋಷ್ಠಿ ನನ್ನ ಕನಸಿನ ಹುಬ್ಬಳ್ಳಿ, ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ, 3.30 ಕ್ಕೆ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಸಾಯಂಕಾಲ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಪೆÇ್ರ. ಕೆ.ಎಸ್.ಕೌಜಲಗಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಬಿ.ಎಸ್.ಮಾಳವಾಡ, ಶಕುಂತಲಾ ಹೂಗಾರ ಉಪಸ್ಥಿತರಿದ್ದರು.