ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾದ ವ್ಯಕ್ತಿ, 4 ದಿನಗಳ ನಂತರ ಶವವಾಗಿ ಪತ್ತೆ
ಬೀದರ್:ಫೆ.29: ಮೀನು ಹಿಡಿಯಲು ಕೆರೆಗೆ ಹೋದ ವ್ಯಕ್ತಿಯೊಬ್ಬ ನೀರುಪಾಲಾಗಿದ ಘಟನೆ ಗಡಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದ ಸಮೀಪದಲ್ಲಿರುವ ಕೆರೆಯಲ್ಲಿ ನಡೆದಿದೆ.
ಹತ್ಯಾಳ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಭಾನುವಾರ ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದ ವೇಳೆ ನೀರು ಪಾಲಾಗಿದ್ದ 42 ವರ್ಷದ ಪಾಂಡು ರಾಠೋಡ ಪತ್ತೆಗಾಗಿ ಅಗ್ನಿಶಾಮಕದಳದ ಸಿಬ್ಬಂದಿಗಳು ತೀವ್ರ ಶೋಧ ನಡೆಸಿದ್ದರು.
ನಾಲ್ಕು ದಿನಗಳು ಶೋಧ ಕಾರ್ಯ ನಡೆಸಿದರು ಪತ್ತೆಯಾಗದ ಶವ ಇದಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಸವಾಲ್ ಆಗಿ ಪರಿಣಮಿಸಿತು.
ಈ ಸಂಬಂಧ ಮುಡಬಿ ಪೆÇಲೀಸ್ ಠಾಣೆ ಪೆÇಲೀಸರ ಮನವಿ ಮೇರೆಗೆ ಕಲ್ಬುರ್ಗಿಯ Sಆಖಈ (ಎಸ್.ಡಿ.ಆರ್.ಎಫ್) ತಂಡ ಇಂದು ಹತ್ಯಾಳ ಗ್ರಾಮಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವರಿಸಿದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಶವ ಪತ್ತೆ ಹಚ್ಚುವಲ್ಲಿ (ಎಸ್.ಡಿ.ಆರ್.ಎಫ್) ತಂಡ ಯಶಸ್ವಿ ಆಗಿದೆ.
ಈ ಸಂದರ್ಭದಲ್ಲಿ ಮುಡುಪಿ ಪೆÇಲೀಸ್ ಠಾಣೆ PSI ರೇಣುಕಾ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಾಂಡು ರಾಠೋಡನಿಗೆ ಪತ್ನಿ ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳು ಇದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.