ಇತಿಹಾಸ ಜಗತ್ತಿಗೆ ಪಸರಿಸುವ ಕೆಲಸವಾಗಬೇಕು
ಚನ್ನಮ್ಮನ ಕಿತ್ತೂರು,ಫೆ29: ಸ್ವಾತಂತ್ರ್ಯದ ಬೆಳ್ಳಿಚುಕ್ಕಿಗೆ ಹೆಸರಾದ ರಾಣಿಚನ್ನಮ್ಮ, ಸಂಗೋಳ್ಳಿರಾಯಣ್ಣ, ಒಳಗೊಡಂತೆ ಎಲ್ಲರ ಇತಿಹಾಸವನ್ನು ಜಗತ್ತಿಗೆ ಪಸರಿಸುವ ಮೂಲಕ ಇವರನ್ನು ನೆನಪಿಸಿಕೊಳ್ಳುವ ಕಾರ್ಯ ಮೇಲ್‍ಎತ್ತರಕ್ಕೆರಬೇಕಾಗಿದೆ ಎಂದು ಕಲ್ಮಠದ ರಾಜಗುರು ಮಡಿವಾಳ ರಾಯೋಗೀಂದ್ರ ಸ್ವಾಮಿಜೀ ಹೇಳಿದರು.
ಮಠದ ಅಂಗಳದಲ್ಲಿ ಕನ್ನಡ ಜನಪದ ಪರಿಷತ್ತ ಇವರ ಕಡೆಯಿಂದ ನಡೆದ ಚನ್ನಮ್ಮನ 200ನೇ ವರ್ಷದ ಹೋರಾಟದ ಸವಿನೆನಪಿಗಾಗಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸ್ಮರಣೆ ನಿಮಿತ್ಯ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಉಪನ್ಯಾಸ, ನಿವೃತ್ತ ನೌಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚನ್ನಮ್ಮನ , ಸಂಗೋಳ್ಳಿ ರಾಯಣ್ಣನ ಇತಿಹಾಸ ಈ ನಾಡಿಗೆ ಪರಿಚಯಿಸುವ ಕೆಲಸ ಇನ್ನೂ ಹೆಚ್ಚಾಗಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಪ್ರಭುದ್ಧರಾಗಬೇಕೆಂದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಮೋಹನ ಗುಂಡ್ಲೂರ ಮಾತನಾಡಿ ಜನಪದ ಸಾಹಿತ್ಯ ನಶಿಸಿ ಹೋಗಬಾರದು ಇದು ಉಳಿಯಬೇಕು. ಇದನ್ನು ಉಳಿಸಿಬೆಳೆಸುವ ಕೆಲಸ ನಾವೇಲ್ಲರೂ ಮಾಡಬೇಕೆಂದರು.
ಜಿಪಂ ಸದಸ್ಯೆ ರೋಹಿಣಿ ಪಾಟೀಲ ಜನಪದ ಕುರಿತು ವಿಸ್ತಾರವಾಗಿ ಮಾತನಾಡಿದರು. ಸರ್ಕಾರಿ ಬಾಲಕೀಯರ ಪ್ರೌಢಶಾಲೆ ಉಪಪ್ರಾಂಶುಪಾಲ ಮಹೇಶ ಚನ್ನಂಗಿ ಉಪನ್ಯಾಸ ನೀಡಿದರು.
ಮಕ್ಕಳಿಂದ ಕವಿಗೋಷ್ಠಿ ಏರ್ಪಟ್ಟಿತ್ತು ಅಧ್ಯಕ್ಷತೆವಹಿಸಿ ಬಸವರಾಜ ಬಿದರಿ ಮಾತನಾಡಿ ವಚನ ಸಾಹಿತ್ಯಗಳೆಲ್ಲವೂ, ಕವನಗಳ ಪುಸ್ತಕವಾಗಿ ಹೊರಹೊಮ್ಮಿ ಸರಮಾಲೆಯಾಗಬೇಕೆಂದರು.
ಅತಿಥಿಯಾಗಿ ಅಶೋಕ ಕೊಪ್ಪದ ಮಾತನಾಡಿ ಈ ಪುಣ್ಯಭೂಮಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು ನನಗೆ ಸಂತಸ ತಂದಿದ್ದು ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾದದ್ದು ನಮ್ಮೇಲ್ಲರ ಪೂರ್ವಜನ್ಮದ ಪುಣ್ಯ ಎಂದರು.
ಕವಿಗೋಷ್ಠಿ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಜರುಗಿತು. ಒಟ್ಟು 19 ಕವಿಗಳು ಕವನ ವಾಚನ ಮಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಬೆಂಗಳುರಿನ ಕಸಾಪ ಉತ್ತರ ಕರ್ನಾಟಕ ಸಂಚಾಲಕ ಕೆಎಸ್ ಕೌಜಲಗಿ, ಕಿತ್ತೂರ ನಿಕಟಪೂರ್ವ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ, ಡಿಆರ್ ಪಾಟೀಲ, ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್‍ಡಿ ಬೋಗೂರ, ಚಂದ್ರಶೇಖರ ಚನ್ನಂಗಿ, ಮಹಾಂತೇಶ ಹೊಂಗಲ, ಕಸಾಪ ಅಧ್ಯಕ್ಷರುಗಳಾದ ಎಸ್‍ಬಿ ದಳವಾಯಿ, ಹುಕ್ಕೇರಿಯ ಸುಭಾಸ್ ನಾಯಕ, ಬೈಲಹೊಂಗಲದ ಚಂದ್ರಶೇಖರ ಕೊಪ್ಪದ, ಕುಂದಗೋಳದ ಉಪನ್ಯಾಸಕ ಪ್ರೋ. ಎಂ.ಎಸ್. ಬುಡಶೆಟ್ಟಿ, ಗೊವನಕೊಪ್ಪ ಎಸ್‍ಸಿಎಚ್ ಪ್ರತಿಷ್ಠಾನದ ಮಹಾಂತೇಶ ಹೊಂಗಲ, ಮೀನಾಕ್ಷಿ ಸೂಡಿ, ಚಿನ್ಮಯಿ ಪಾಟೀಲ, ಸೌಭಾಗ್ಯ ಕೊಪ್ಪ, ಸುಧಾ ಹುಲಗೂರ, ಸೇರಿದಂತೆ ಮಕ್ಕಳು, ಸಾರ್ವಜನಿಕರಿದ್ದರು. ನಿರೂಪಣೆ ಜ್ಯೋತಿಲಕ್ಷ್ಮೀ ಬಡಿಗೇರ, ಸ್ವಾಗತ ವಂದನಾ ಕರಾಳೆ, ವಂದನಾರ್ಪಣೆ ಲತಾ ಬಾರಕೇರ, ಸವಿತಾ ಕೊಬಾಗಿ, ವಿಜಯಲಕ್ಷ್ಮೀ ದೇಸಾಯಿ ಕವಿಗೊಷ್ಠಿ ನಿರ್ವಹಣೆ ಮಾಡಿದರು.