ಮಕ್ಕಳ ಸದೃಢತೆಗೆ ಪೌಷ್ಠಿಕ ಆಹಾರ ಆಗತ್ಯ
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.29: ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ಪೌಷ್ಟಿಕತೆಯಿಂದ ಕೂಡಿದ ಸಮತೋಲನ ಆಹಾರ ಸೇವಿಸಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಡಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ದೃಷ್ಟಿದೋಷವುಳ್ಳ ಶಾಲಾ ಮಕ್ಕಳಿಗೆ ಉಚಿತ ಕನ್ನಡ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡಕ ವಿತರಣೆ ಮಾಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರತಿದಿನ ನಿಯಮಿತವಾಗಿ ಹಾಲು, ಹಣ್ಣು,ಮೊಟ್ಟೆ, ಮಾಂಸ, ಮೀನು, ಹಸಿತರಕಾರಿ,ದ್ವಿದಳಧಾನ್ಯ,ಕಾರ್ಬೋಹೈಡ್ರೇಟ್ ಮುಂತಾದ ಆಹಾರವನ್ನು ಸೇವಿಸಬೇಕು.           ಆ ಮೂಲಕ ಆರೋಗ್ಯ ಕಾಪಾಡಿಕೊಂಡು ನೆನಪಿನ ಶಕ್ತಿ, ಏಕಾಗ್ರತೆ,ಯೋಚನಾಶಕ್ತಿ ಹೆಚ್ಚಿಸಿ ಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳಾದ ಕೆ.ಸುನಿಲ್, ಸ್ವಾಮಿ, ಕೆ.ಗೀತಾ, ಗಾಯತ್ರಿ, ಪ್ರಿಯಾಂಕಾ ಗೆ ಕನ್ನಡಕ ವಿತರಿಸಲಾಯಿತು.
ಶಿಡಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ನೇತ್ರ ಸಹಾಯಕಿ ವಿಜಯಲಕ್ಷ್ಮಿ, ವಿದ್ಯಾರ್ಥಿ ಪೋಷಕರಾದ ಕೆ.ಪಿ.ಸುಂಕಣ್ಣ, ಶಿಕ್ಷಕರಾದ ವಿ.ಬಸವರಾಜ, ಕೆ.ಸುಮತಿ, ಉಮ್ಮೆಹಾನಿ, ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.