ಮತ್ತೆ ಬುಡಾ ಅಧ್ಯಕ್ಷರಾದಆಂಜನೇಯಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,29- ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ಕ್ಕೆ ಮತ್ತೆ ಜೆ.ಎಸ್.ಆಂಜನೇಯಲು ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ರಾಜ್ಯದ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಲಗೈ ಬಂಟರಾದ ಇವರು ಈ ಹಿಂದೆ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಆದಾಗಲೂ ಬುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಆಗ ಇವರು ನಗರದ ಬಿ.ಗೋನಾಳ್ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳ ಅಭಿವೃದ್ಧಿಗೆ ಶ್ರಮಿಸಿದ್ದರು.
ಬಡಾವಣೆಗಳಲ್ಲಿ ಸ್ಟೀಲ್ ಸೈನ್ ಬೋರ್ಡ್ ಗಳನ್ನು ಅಳವಡಿಸಿ ಗಮನ ಸೆಳೆದಿದ್ದರು.
ವಾಸ್ತವದಲ್ಲಿ ರಾಜ್ಯ ಮಟ್ಟದ ಬೋರ್ಡ್ ಅಧ್ಯಕ್ಷರಾಗಲು ಪ್ರಯತ್ನಿಸಿದ್ದರು. ಆದರೆ ಅವರ ರಾಜಕೀಯ ಗುರು ಡಿಕೆಶಿ ಅವರ ಸೂಚನೆಯಂತೆ ಮತ್ತೆ ಬುಡಾ ಅಧ್ಯಕ್ಷರಾಗಿದ್ದಾರೆ.
ಬುಡಾ ಅಧ್ಯಕ್ದರಾಗಲು, ಬೆಣಕಲ್ ಬಸವರಾಜಗೌಡ, ಸಿದ್ದಮ್ಮನಹಳ್ಳಿ ತಮ್ಮನ ಗೌಡ ಸೇರಿದಂತೆ ಅನೇಕರು ಪ್ರಯತ್ನಿಸಿದ್ದರು.