ಓರ್ವ ಕಳ್ಳನ ಬಂಧನ, ಆಭರಣಗಳು ಪೋಲಿಸರ ವಶಕ್ಕೆ
ಲಿಂಗಸೂಗೂರು.ಫೆ.೨೯- ತಾಲೂಕಿನ ಜಿಲ್ಲಾ ಪೋಲಿಸ್ ಅಧೀಕ್ಷರು ರಾಯಚೂರು ಮತ್ತು ಪೋಲಿಸ ಉಪಾಧೀಕ್ಷರು ಲಿಂಗಸೂಗೂರು ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪೋಲಿಸರು ಕಳ್ಳನೋರ್ವನನ್ನು ಮಂಗಳವಾರ ಬಂಧಿಸಿ ಕಳವು ಮಾಡಿದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಗಂಗಾವತಿ ತಾಲೂಕಿನ ಪಿಡಬ್ಲೂಡಿ ಕ್ಯಾಂಪ್‌ನ ವಡ್ಡರಹಟ್ಟಿಯ ಈಗ ಹಾಲಿ ವಸತಿ ಹೈದಾರಬಾದ್‌ನ ನಾಮಪಲ್ಲಿ ನಿವಾಸಿ ರಹಿಮಾ (೪೪) ಬಂಧಿತ ಆರೋಪಿಯಾಗಿದ್ದು, ಇದರೊಂದಿಗೆ ಎರಡು ಬಂಗಾರದ ಆಭರಣ ಕಳ್ಳತನ ಪ್ರಕರಣಗಳನ್ನು ಬೇಧಿಸಿದಂತಾಗಿದೆ. ಅಪರಾಧ ಸಂಖ್ಯೆ ೨೫೩/೨೦೨೪ ಪ್ರಕರಣದಲ್ಲಿ ಕಳುವಾದ ೧೫೨ ಗ್ರಾಂ ಬಂಗಾರದ ಆಭರಣದ ಅಂದಾಜು ಮೌಲ್ಯ ೭೨೬೫೦೦ ರೂ ಹಾಗೂ ಅಪರಾಧ ಸಂಖ್ಯೆ :೨೦೪/೨೦೨೪ ಪ್ರಕರಣದಲ್ಲಿ ೩೦ ಗ್ರಾಂ ಅಂದಾಜು ಮೌಲ್ಯ ೧೩೫೦೦೦ ರೂ ಪ್ರಕರಣಗಳನ್ನು ಭೇಧಿಸಿದ್ದು, ಪೋಲಿಸರ ಕ್ರಮಕ್ಕೆ ಶ್ಲಾಘಿಸಿದ್ದಾರೆ.
ಈ ವೇಳೆ ಸಿಪಿಐ ಪುಂಡಲಿಕರ ಎಂ.ಪಟಾತರ, ಪಿಎಸ್‌ಐ ಹನುಮಂತ, ಚನ್ನಪ್ಪ, ಈರಣ್ಣ ,ಚನ್ನಬಸವ, ಸೂಗುರಪ್ಪ, ಸೋಮಪ್ಪ,ಭೀಮಣ್ಣ, ಸಿದ್ದಪ್ಪ, ಶ್ರೀಕಾಂತ, ರಂಗನಾಥ, ಅಮರೇಶ, ಅಜಿತ್ ಸಿಬ್ಬಂದಿಗಳು ಇದ್ದರು.