ಸೇಡಮ್ ಪಟ್ಟಣದಲ್ಲಿ ಬುದ್ಧವಿಹಾರ ನಿರ್ಮಾಣಕ್ಕಾಗಿ ಜಮೀನು ಮಂಜೂರಾತಿಗೆ ಮನವಿ
ಕಲಬುರಗಿ:ಫೆ.29:ತಾಲ್ಲೂಕು ಕೇಂದ್ರವಾಗಿರುವ ಸೇಡಮ್ ಪಟ್ಟಣದಲ್ಲಿ ಬುದ್ಧವಿಹಾರ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನು ಮಂಜೂರು ಮಾಡಬೇಕೆಂದು ಕೋರಿ ಜಿಲ್ಲಾಧಿಕಾರಿಗಳಿಗೆ ಮಹಾಬೋಧಿ ಚಾರಿಟೇಬಲ್ ಮತ್ತು ವೆಲ್‍ಫೇರ್ ಟ್ರಸ್ಟ್ ವತಿಯಿಂದ ಮನವಿಯನ್ನು ಸಲ್ಲಿಸಿದೆ.
ಸಮಾಜದ ಸರ್ವ ಜನಾಂಗ ಸಮಾನವಾಗಿ ಬಾಳಬೇಕೆಂದು ಶಾಂತಿ ಸಂದೇಶವನ್ನು ಸಾರಿ ಹೋಗಿರುವ ಗೌತಮ ಬುದ್ದನ ಪವಿತ್ರವಾದ ವಿಹಾರ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಿ ಅಲ್ಲಿ ಬುದ್ಧನ ಸಂದೇಶ ಸಾರುವ ಕಲಾಕೃತಿಗಳನ್ನು ನಿರ್ಮಾಣ ಮಾಡಬೇಕೆಂದು ಟ್ರಸ್ಟ್ ನ ಅಧ್ಯಕ್ಷರಾದ ಸುನೀಲ್‍ಕುಮಾರ್ ಕೆ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷರಾದ ಹಣಮಂತ ಸಾಗರ, ಪ್ರಧಾನ ಕಾರ್ಯದರ್ಶಿ ಮಾರುತಿ ಹುಳಗೋಳಕರ್, ಸಹ ಕಾರ್ಯದರ್ಶಿ ಸೋಮಣ್ಣ ಊಡಗಿ, ಖಜಾಂಚಿ ರವೀಂದ್ರ ಜಡೇಕರ್, ಮುಖಂಡರಾದ ಶಿವಪುತ್ರ ಎಮ್, ಹಾಗರಗಿ ಮುಂತಾದವರು ಇದ್ದರು.