ಮನುಕುಲದ ಸಮಸ್ಯೆಗಳ ಇತ್ಯರ್ಥಕ್ಕೆ ವೈಜ್ಞಾನಿಕ ಮನೋಭಾವ ಅಗತ್ಯ: ಪ್ರೊ. ಬಟ್ಟು ಸತ್ಯನಾರಾಯಣ್
ಕಲಬುರಗಿ:ಫೆ.28: ವಿದ್ಯಾರ್ಥಿಗಳು ಮತ್ತು ಮಕ್ಕಳು ಯಾವಾಗಲೂ ಕುತೂಹಲದಿಂದ ಗಮನಿಸಬೇಕು ಮತ್ತು ಮನುಕುಲದ ಸಮಸ್ಯೆಗಳನ್ನು ಪರಿಹರಿಸಲು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ “ದ್ಯುತಿಸಂಶ್ಲೇಷಣೆಯ ವಿದ್ಯಮಾನಗಳು, ಪ್ರಕೃತಿಯಲ್ಲಿನ ಅಂಶಗಳು, ಆಮ್ಲಜನಕದ ಅನ್ವೇಷಣೆಯ ಪಾತ್ರ, ಗುರುತ್ವಾಕರ್ಷಣೆ, ಶಕ್ತಿ ಇತ್ಯಾದಿಗಳು ನಿಮಗೆ ತಿಳಿದಿದೆಯೇ” ಎಂದು ಕೇಳಿದರು.
ನೊಬೆಲ್ ಪ್ರಶಸ್ತಿ ವಿಜೇತ ಸರ್. ಸಿ.ವಿ. ರಾಮನ್, ಆಚಾರ್ಯ ಪ್ರಫುಲ್ಲ ಚಂದ್ರ ರೇ, ಹರ್ ಗೋಬಿಂದ್ ಖೋರಾನಾ ಹೀಗೆ ಅನೇಕ ಭಾರತೀಯ ವಿಜ್ಞಾನಿಗಳು ದೇಶದ ವೈಜ್ಞಾನಿಕ ಪ್ರಗತಿಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಅವರು, ಪ್ರತಿ ವರ್ಷ ಫೆಬ್ರವರಿ 28ರಂದು ‘ರಾಮನ್ ಎಫೆಕ್ಟ್’ ಆವಿμÁ್ಕರದ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ವಿಕಸಿತ್ ಭಾರತಕ್ಕೆ ಸ್ವದೇಶಿ ತಂತ್ರಜ್ಞಾನಗಳು’ ಎಂಬ ವಿಷಯದಡಿಯಲ್ಲಿ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ ಎಂದರು.
ಮೊದಲ ದಿನದ ಚಟುವಟಿಕೆಯಲ್ಲಿ ಕಲಬುರಗಿಯ ಕೆನ್‍ಬ್ರಿಡ್ಜ್ ಶಾಲೆ, ಅಪ್ಪಾ ಪಬ್ಲಿಕ್ ಶಾಲೆ ಮತ್ತು ಎಸ್‍ಆರ್‍ಎನ್ ಮೆಹ್ತಾ ಪ್ರೌಢ ಶಾಲೆಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನೆಯ ನಂತರ, ಪ್ರೌಢಶಾಲಾ ಮಕ್ಕಳನ್ನು ರಸಾಯನಶಾಸ್ತ್ರ ವಿಭಾಗದ ವಿವಿಧ ಪ್ರಯೋಗಾಲಯಗಳಿಗೆ ಕರೆದೊಯ್ಯಲಾಯಿತು, ಅಲ್ಲಿ ಸುಮಾರು ಇಪ್ಪತ್ತು ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. ಕೆಲ ಪ್ರಯೋಗಗಳೆಂದರೆ ಇನ್ವಿಸಿಬಲ್ ಇಂಕ್, ಎಲಿಫೆಂಟ್ ಟೂತ್ ಪೇಸ್ಟ್, ನಕಲಿ ರಕ್ತ, ಎಲೆಕ್ಟ್ರೋಪ್ಲೇಟಿಂಗ್, ಡ್ಯಾನ್ಸಿಂಗ್ ಸೋಡಿಯಂ, ಲಾವಾ ಲ್ಯಾಂಪ್, ಆಹಾರ ಕಲಬೆರಕೆ, ಹಾಟ್ ಐಸ್ ಪ್ರಯೋಗ, ಮಾಯವಾಗುತ್ತಿರುವ ಬಣ್ಣದ ಪ್ರಯೋಗ ಇತ್ಯಾದಿ. ಪ್ರೌಢಶಾಲಾ ಮಕ್ಕಳು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಂಶೋಧನಾ ಉಪಕರಣಗಳು ಮತ್ತು ರಸಾಯನಶಾಸ್ತ್ರದಲ್ಲಿ ಅವುಗಳ ಪಾತ್ರವನ್ನು ವೀಕ್ಷಿಸಿದರು. ಎಲ್ಲ ಶಾಲಾ ಮಕ್ಕಳು ಪ್ರಯೋಗಗಳಲ್ಲಿ, ವಿಜ್ಞಾನದ ಆಟಗಳಲ್ಲಿ ಮತ್ತು ರಸಪ್ರಶ್ನೆಗಳಲ್ಲಿ ಕುತೂಹಲ, ಉತ್ಸಾಹ ಮತ್ತು ಸಕ್ರಿಯವಾಗಿ ಭಾಗವಹಿಸಿದರು.
ಸಂಜೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಆಹಾರ ಮಳಿಗೆಗಳ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳು ನಡೆದವು. ಮಂಗಳವಾರ ವಿಜ್ಞಾನ ಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೆÇ್ರ. ರಾಘವಯ್ಯ ಅವರು ಸ್ವಾಗತಿಸಿದರು. ಪ್ರೊ. ವೆಂಕಟರಮಣದೊಡ್ಡಿ ಅವರು ವಿದ್ಯಾರ್ಥಿಗಳ ಚಟುವಟಿಕೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಪೆÇ್ರ. ಹನುಮೇಗೌಡ, ಪೆÇ್ರ. ಎಸ್. ವಿಶ್ವಂತ್ ಭೋಸ್ಲೆ, ಡಾ. ಹರೀಶ್ ಹೊಳ್ಳ, ಡಾ. ವೆಂಕಟನಾರಾಯಣ್, ಡಾ. ದೊರೈ ಪಾಂಡಿ, ಡಾ. ಆಂಜನೇಯಲು, ಡಾ. ಅಶೋಕ್, ಅಧ್ಯಾಪಕರು, ವಿದ್ಯಾರ್ಥಿಗಳು, ಅತಿಥಿಗಳು ಉಪಸ್ಥಿತರಿದ್ದರು.