ಪ್ರಧಾನಮಂತ್ರಿ ಆವಾಸ್ ಮನೆ ಫಲಾನುಭವಿಗೆ ಹಸ್ತಾಂತರ
ಸAಜೆವಾಣಿ ವಾರ್ತೆ,
ವಿಜಯಪುರ,ಸೆ.೧೬: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ೨೦೨೧-೨೨ನೇ ಸಾಲಿನಲ್ಲಿ ಪೂರ್ಣಗೊಂಡ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಭಾಗವಹಿಸಿ ಫಲಾನುಭವಿಯಾದ ಗಂಗಾ ಬಗಲಿ ಅವರಿಗೆ “ಕೀ ” ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಎ.ಬಿ. ಅಲ್ಲಾಪುರ ಟಿಎನ್‌ಒಗಳಾದ ಪಿ. ಡಿ. ಗುಡದಿನ್ನಿ, ಕಲ್ಯಾಣಶೆಟ್ಟಿ, ಪಿಡಿಒ ರಾಜಶೇಖರ ಬಿರಾದಾರ, ಹಿಟ್ನಳ್ಳಿ ಭಾಗವಹಿಸಿದ್ದರು.