ಕಲಾಕುಂಚದಿಂದ “ದಾವಣಗೆರೆ ಗೃಹಿಣಿ” ಸ್ಪರ್ಧೆಗೆ ಆಹ್ವಾನ ಅವಧಿ ವಿಸ್ತರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ-ಫೆ.29; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ “ದಾವಣಗೆರೆ ಗೃಹಿಣಿ ಸ್ಪರ್ಧೆ-2024” ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರ ಮಹಿಳಾ ಸಂಘಟಕರ ಒತ್ತಾಯದ ಮೇರೆಗೆ ಪ್ರವೇಶ ಪತ್ರ ಭರ್ತಿ ಮಾಡಿಕೊಡುವ ಅವಧಿ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.ಅಡಿಗೆ ಮನೆಗೆ ಸೀಮಿತವಾದ ಪ್ರತಿಭಾವಂತ ಮಹಿಳೆಯರ ಅವರ ಅಪ್ರತಿಮ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಏರ್ಪಡಿಸಲಾದ ಈ ಸ್ಪರ್ಧೆಯಿಂದ ಅವರ ಜ್ಞಾನಶಕ್ತಿ, ಸಾಮಾನ್ಯಜ್ಞಾನ, ಸ್ವಯಂ ಪ್ರತಿಭೆಗಳು ಹೆಚ್ಚಿಸುವ ಈ ವೇದಿಕೆಯನ್ನು ಸದ್ಭಳಕೆ ಮಾಡಿಕೊಳ್ಳುವ ಆಸಕ್ತ ಮಹಿಳೆಯರು ಯಾವುದೇ ವಯೊಮಾನದ ಬೇಧವಿಲ್ಲದೇ ಭಾಗವಹಿಸುವ ಗೃಹಿಣಿಯರು (ವಿವಾಹಿತರು) ದಿನಾಂಕ 10-3-2024ರೊಳಗೆ ಸಂಸ್ಥೆಯ ಕಛೇರಿಗೆ ಆಗಮಿಸಿ ಪ್ರವೇಶ ಪತ್ರ ಭರ್ತಿ ಮಾಡಿಕೊಡಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲೀಲಾ ಸುಭಾಷ್ ತಿಳಿಸಿದ್ದಾರೆ.ಕಲಾಕುಂಚ ಕಛೇರಿ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕೆ.ಬಿ.ಬಡಾವಣೆ, ಕುವೆಂಪು ರಸ್ತೆ, (ಲಾಯರ್ ರೋಡ್), ದಾವಣಗೆರೆ-577002 ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಲು ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ ವಿನಂತಿಸಿದ್ದಾರೆ.