ಜಂತುಹುಳು ನಿವಾರಣಾ ದಿನ ಸಮನ್ವಯ ಸಮಿತಿಯ ಸಭೆ
ಕಲಬುರಗಿ:ಫೆ.28: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್ ವಿಭಾಗ, ಕಲಬುರಗಿ ರಾಷ್ಟ್ರೀಯ ಜಂತುಹುಳು ನಿವಾವರಣಾ ದಿನ ಸಮನ್ವಯ ಸಮಿತಿಯ ಸಭೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭoವರ್ ಸಿಂಗ್ ಮೀನಾ ನೇತೃತ್ವದಲ್ಲಿ ನಡೆಯಿತು.
ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಂತುಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಿಲ್ಲಾ ಮಟ್ಟದ ಸಮನ್ವಯ ಸಮತಿಯಲ್ಲಿ ಅಧಿಕಾರಿಗಳು ತಮಗೆ ನಿರ್ವಹಿಸಿದ ಕೆಲಸ ಕಾರ್ಯಗಳನ್ನು ನೂರು ಪ್ರತಿಶತದಷ್ಟು ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್.ಸಿ.ಹೆಚ್. ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ ಮಾತನಾಡಿ, ಯಾವ ತಾಲೂಕುಗಳಲ್ಲಿ ಕಡಿಮೆ ಮಾತ್ರೆಯನ್ನು ನೀಡಿದ್ದೇವೆ ಎಲ್ಲಿ ಜಂತುಹುಳಗಳ ಸೇವನೆ ಕಡಿಮೆ ಪ್ರಮಾಣ ಸೇವನೆ ಮಾಡಿದ್ದಾರೆ ಅಲ್ಲಿ ಹೆಚ್ಚಿನ ಒತ್ತು ಕೊಡಲಾಗುವುದು ಎಂದರು.
2023-24 ನೇ ಸಾಲಿನ ರಾಜ್ಯಾದ್ಯಂತ ರಾಷ್ಟೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಹಮ್ಮಿಕೊಳ್ಳಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ 1 ರಿಂದ 19 ವರ್ಷದ ಒಟ್ಟು 1166602 ಮ್ಕಳಿಗೆ 400 ಎಂಜಿ ಅಲ್ಬೆಂಡೋಜೋಲ್ ಮಾತ್ರೆ ನೀಡುವ ಗುರಿಯಿದ್ದು 1 ರಿಂದ 5 ವರ್ಷದ ಮಕ್ಕಳಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ 6 ರಿಂದ 16 ವರ್ಷದ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಹಾಗೂ 17 ರಿಂದ 19 ವರ್ಷದ ಮಕ್ಕಳಿಗೆ ಎಲ್ಲಾ ಕಾಲೇಜುಗಳಲ್ಲಿ ಉಚಿತವಾಗಿ ಅಲ್ಬೆಂಡೋಜೋಲ್ ಮಾತ್ರೆಗಳನ್ನು ನೀಡಲಾಗುತ್ತದೆ.
1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ಹತ್ತಿರದ ಶಾಲೆ ಅಥವಾ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು ಮತ್ತು ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಕೊಡದೆ ವಂಚಿತರಾದ ಮಕ್ಕಳಿಗೆ ಮಾಪ – ಆಫ್ ದಿನದಂದು ಕಡ್ಡಾಯವಾಗಿ ಈ ಮಾತ್ರೆಯನ್ನು ಕೊಡಿಸಬೇಕು. ಸುರಕ್ಷಿತ ಹಾಗೂ ಪ್ರಯೋಜನಕಾರಿಯಾದ ಜಂತು ಹುಳ ನಾಶಕ ಮಾತ್ರೆಯನ್ನು ಉಚಿತವಾಗಿ ನಿಡಲಾಗುತ್ತದೆ, ಎಂದರು.
1 ವರ್ಷದಿಂದ 2 ವರ್ಷದ ಮಕ್ಕಳಿಗೆ 400 ಎಂಜಿ ಅಲ್ಬೆಂಡೋಜೋಲ್ ಅರ್ಧ ಮಾತ್ರೆಯನ್ನು 2 ವರ್ಷದಿಂದ 19 ವರ್ಷದ ಮಕ್ಕಳಿಗೆ ಒಂದು ಮಾತ್ರೆಯನ್ನು ನೀಡಲಾಗುವುದು ಇದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಎಂದರು.
ಜಿಲ್ಲಾಧ್ಯಂತ ಎಂ.ಡಿ.ಎ. ಕಾರ್ಯಕ್ರಮದಡಿಯಲ್ಲಿ ಅಲ್ಬೆಂಡೋಜೋಲ್ 400 ಎಂಜಿ ಮಾತ್ರೆಗಳನ್ನು ವಿತರಿಸಲಾಗುತ್ತಿದ್ದು, ಅಂತಹ ಸ್ಥಳಗಳಲ್ಲಿ 2 ವರ್ಷ ಮೇಲ್ಪಟ್ಟ ಫಲಾನುಭವಿಗಳನ್ನು ಹೊರತುಪಡಿಸಿ 01 ರಿಂದ 02 ವರ್ಷದ ಮಕ್ಕಳಿಗೆ ಹಾಗೂ ಎಂ.ಡಿ.ಎ.ಕಾರ್ಯಕ್ರಮ ನಡೆಯದೆ ಇರುವಂತಹ ಸ್ಥಳಗಳಲ್ಲಿ 1 ವರ್ಷದಿಂದ 19 ವರ್ಷದವರೆಗೆ ವರ್ಷ ಹಾಗೂ ಎಂ.ಡಿ.ಎ. ಕಾರ್ಯಕ್ರಮ ಚಾಲ್ತಿಯಲ್ಲಿರುವ ಇರುವಂತಹ ಸ್ಥಳಗಳಲ್ಲಿ 01 ವರ್ಷದಿಂ 2 ವರ್ಷದ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ 400 ಎಂಜಿ ಅಲ್ಬೆಂಡೋಜೋಲ್ ಅರ್ಧ ಮಾತ್ರೆಯನ್ನು ನೀಡಲಾಗುತ್ತದೆ.
ಡಿಹೆಚ್‍ಓ ಡಾ.ರತಿಕಾಂತ ಸ್ವಾಮಿ ,ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಮ್ಸ್ ಆಸ್ಪತ್ರೆ ಡಾ. ಅಂಬಾರಾಯ ರುದ್ರವಾಡಿ, ಜಿಲ್ಲಾ ಸಿ ಸಿ ಟಿ ಅಧಿಕಾರಿಗಳು ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಡಿ ಎಲ್ ಓ ಅಧಿಕಾರಿಗಳು ಡಾ. ರಾಜಕುಮಾರ ಕುಲಕರ್ಣಿ, ಜಿಲ್ಲಾ ಎನ್ ವಿ ಡಿ ಬಿಸಿ ಅಧಿಕಾರಿಗಳು ಡಾ. ಬಸವರಾಜ ಗುಳಗಿ, ಕಲಬುರಗಿ ತಾಲೂಕಿನ ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ಮಾರುತಿ ಕಾಂಬಳೆ , ಜಿಲ್ಲಾ ಆಕುಕ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಕ್ಯಾತನಾಳ, ಉಪ ನಿರ್ದೇಶಕರು ಮ ಮ ಕ ಇ ನವೀನ ಕುಮಾರ, ಜಿಲ್ಲಾ ಅಯುಷ ಅಧಿಕಾರಿಗಳು ಡಾ. ಗಿರಿಜಾ , ಡಿಪಿಎಂ ವಿರೇಶ ಜವಳಕರ್, ಜಿಲ್ಲಾ ಸಂಯೋಜಕ ರವೀಂದ್ರ ಠಾಕೂರ್, ಜಿಲ್ಲಾ ಸಂಯೋಜಕರು ಆರ್ ಕೆ ಎಸ್ ಕೆ. ಶಿವಕುಮಾರ್ ಕಾಂಬಳೆ , ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.