ಮಟಕಾ:ಓರ್ವನ ಬಂಧನ
ಕಲಬುರಗಿ,ಫೆ.28-ಶಿವಾಜಿ ನಗರದ ಹನುಮಾನ ದೇವಸ್ಥಾನ ಎದರುಗಡೆಯ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಎಸ್‍ಐ ಸೈಯದಾ ತಸ್ಲೀಮಾ ಮತ್ತು ಸಿಬ್ಬಂದಿ ದಾಳಿ ನಡೆಸಿ ಮಿಲ್ಲತ್ ನಗರದ ಅಜಮ್ ಬಾಬಾ ಖುರೇಷಿ ಎಂಬಾತನನ್ನು ಬಂಧಿಸಿ 3150 ರೂ.ನಗದು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.