ಪಿಎಂ ದಕ್ಷ ಡಿಜಿಟಲ್ ಪೋರ್ಟಲ ಕುರಿತು ಕಾನೂನು ಅರಿವು ನೆರವು
ಬೀದರ,ಫೆ.28: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾವಕೀಲರ ಸಂಘ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿವಿಕಲಾಂಗ ವ್ಯಕ್ತಿಗಳ ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಪಿಎಂ ದಕ್ಷ ಡಿಇಪಿಡಬ್ಲ್ಯೂಡಿ ಡಿಜಿಟಲ್ ಪೆÇೀರ್ಟಲ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಬೀದರ್ ತಾಲೂಕ ಪಂಚಾಯತನಲ್ಲಿ ನಡೆಸಲಾಯಿತು.
ವಿಕಲಾಂಗ ವ್ಯಕ್ತಿಗಳ ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಪಿಎಂ ದಕ್ಷ ಡಿಇಪಿಡಬ್ಲ್ಯೂಡಿ ಡಿಜಿಟಲ್ ಪೆÇೀರ್ಟಲ
ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನುಹಿರಿಯ ಸಿವಿಲ್‍ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಕಟ್ಟೆ. ಅವರು ಸಸಿಗೆ ನೀರು ಎರೆವುದರ ಮೂಲಕ ಉದ್ಛಾಟಿಸಿ ಅವರು ವಿಕಲಾಂಗವ್ಯಕ್ತಿಗಳ ಕೌಶಲ್ಯ ಮತ್ತು ಉದ್ಯೋಗಳ ಬಗ್ಗೆ ಮಾತನಾಡಿದ್ದರು.ಉಪನ್ಯಾಸಕರಾಗಿ ಹಿರಿಯ ವಕೀಲ ಬಿ.ಎಸ್. ಪಾಟೀಲ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಚೇತನರ ಹಾಗೂ ಹಿರಿಯ ನಾಗರಿಕರಸಬಲೀಕರಣ ಇಲಾಖೆ ಅಧಿಕಾರಿ ನಾಗರಾಜ ಮಠ ಅಧ್ಯಕ್ಷತೆ ಮಾತನಾಡಿದ್ದರು. ತಾಲೂಕ ಪಂಚಾಯತ ಕಾರ್ಯನಿರ್ವಹಣ ಅಧಿಕಾರಿ ಕಿರಣಪಾಟೀಲ ಹಾಗೂ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಆಕಾಶ ಸಜ್ಜನ ಹಾಗೂ ಜಿಲ್ಲಾ ವಿಕಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.