ಪಾಕ್ ಪರ ಘೋಷಣೆಗೆ ಬಿಜೆಪಿ ಆಕ್ರೋಶ:ಕಾಂಗ್ರೆಸ್ ಕಚೇರಿ ಮುತ್ತಿಗೆ
ಕಲಬುರಗಿ,ಫೆ.28: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಖಂಡಿಸಿ ಹಾಗೂ ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಇಂದು ಕಾಂಗ್ರೆಸ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಲಾಯಿತು .
ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಹಾಗೂ ಕಲಬುರಗಿ ನಗರ ಜಿಲ್ಲಾ ಯುವ ಮೋರ್ಚಾ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ್, ನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ದೇಸಾಯಿ , ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಮಹದೇವ್ ಬೆಳಮಗಿ, ಉಮೇಶ್ ಪಾಟೀಲ್, ವೀರೇಂದ್ರ ಪಾಟೀಲ್ ರಾಯಕೋಡ್, ದಿಗಂಬರ ಮಾಗಣಗೇರಿ, ಮಹೇಶ್ ಚವಾಣ್,ಶ್ರೀಧರ್ ಚವಾಣ್, ಮಲ್ಲಿಕಾರ್ಜುನ ಗೊಳೆದ ,ಮದನ ಯಾಗಪುರ,ಶಿವಯೋಗಿ ನಾಗನಳ್ಳಿ, ಮಹೇಶ್ ರೆಡ್ಡಿ, ಸುಂದರ ಕುಲಕರ್ಣಿ, ಶರಣು ಸಜ್ಜನ್, ವರದ ಶಂಕರ್ ಶೆಟ್ಟಿ, ಶಿವಲಿಂಗ ಪಾಟೀಲ್, ರಾಜು ದೇವದುರ್ಗ, ಬಸವರಾಜ್ ಬಿರಾಳ, ರವಿ ಹಾಗರ್ಗಿ ಇತರ ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು.