ಭೀಕರ ರಸ್ತೆ ಅಪಘಾತಟ್ರಕ್-ಪಿಕ್‍ಅಪ್ ವಾಹನ ಡಿಕ್ಕಿ; ನಾಲ್ವರು ಸಾವು
ಬೀದರ್,ಫೆ.28: ಟ್ರಕ್ ಹಾಗೂ ಪಿಕ್ ಅಪ್ ವಾಹನ ( ಟಾಟಾ ಏಸ್ )ದ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ನಡೆದಿದೆ. ಬೆಳಿಗ್ಗೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ದಸ್ತಗಿರ್ ದಾವಲಸಾಬ್ (36), ರಸೀದಾ ಶೇಕ್ (41), ಟಾಟಾ ಎಸಿ ಚಾಲಕ ವಲಿ (31) ಮತ್ತು ಅಮಾಮ್ ಶೇಕ್ (51) ಮೃತರು.
ಮೃತಪಟ್ಟಿರುವ ಎಲ್ಲರೂ ಮಹಾರಾಷ್ಟ್ರದ ಉದ್ಗೀರ್ ಮೂಲದವರು ಎಂದು ತಿಳಿದು ಬಂದಿದೆ.ಐವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಟಾಟಾ ಏಸ್ ನಲ್ಲಿ 6 ಜನ ಮಹಿಳೆಯರು 5 ಜನ ಪುರುಷರು ಮತ್ತು 3 ಮಕ್ಕಳು ಪ್ರಯಾಣಿಸುತ್ತಿದ್ದರು.