ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೊಂದಿರಬೇಕು:ಹೆಚ್ ಪಿ.ಗೌಡಗಾವಕರ್
ಚಿಟಗುಪ್ಪ:ಫೆ.28:ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೊಂದಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತೆ ಎಂದು ಬಸವೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಹಣಮಂತ ಪಿ.ಗೌಡಗಾವಕರ್ ಹೇಳಿದರು.
ತಾಲೂಕಿನ ತಾಳಮಡಗಿ ಗ್ರಾಮದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ವಿದ್ಯಾರ್ಥಿ ಜೀವನದಲ್ಲಿ ಬಿಳ್ಕೊಡುಗೆ ಎಂಬುದು ಅನಿವಾರ್ಯವಾಗಿರುವಂತಹದ್ದು,ಹಾಗಾಗಿ ನಮ್ಮ ಕಾಲೇಜಿನಲ್ಲಿ ಓದಿದ ನೀವುಗಳು ಉತ್ತಮ ಅಂಕ ಪಡೆದುಕೊಂಡು ತಮ್ಮ ಗುರಿ ಸಾದಿಸಿದ್ದಲ್ಲಿ ತಮಗೂ ಹೆಸರು ಬರುತ್ತೆ ಅದರ ಜೊತೆಗೆ ನಮ್ಮ ಕಾಲೇಜಿಗೂ ಕೀರ್ತಿ ಬರುತ್ತದೆ.ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದಂತೆ ತಿಳಿದುಕೊಂಡು ಬರುವ ಪರೀಕ್ಷೆ ಎದುರಿಸಬೇಕು.ಪರೀಕ್ಷೆ ಅಂದರೆ ಹೆದರೋದಲ್ಲ ಸಂತೋಷದಿಂದ ಬರೆಯುವುದು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಈಶ್ವರ ನೇಳಗಿ ಮತ್ತು ಉಪನ್ಯಾಸಕರಾದ ಶ್ರೀಮತಿ ಅಂಬಿಕಾ ಹಾಗು ರವೀಂದ್ರ ರೆಡ್ಡಿ ಕೂಡ ಸಮಾರಂಭವನ್ನ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದರು.ಈ ಸಂದರ್ಭದಲ್ಲಿ ಅತಿಥಿಯಾದ ಕಾಶಿನಾಥ ಬಾಷೆಟ್ಟಿ,ಕಾಲೇಜಿನ ಉಪನ್ಯಾಸಕರಾದ ಸಂಜುಕುಮಾರ್ ಜುಮ್ಮಾ,ಶ್ರೀನಾಥ,ರಾಜಕುಮಾರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಮಹಾಲಕ್ಷ್ಮಿ ಶಿವಪುತ್ರ ನಿರೂಪಿಸಿದರು,ಭಾಗ್ಯಶ್ರೀ ನರಸಪ್ಪ ಸ್ವಾಗತಿಸಿದರು,ನಂದಿನಿ ಅಂಬಣ್ಣ ವಂದಿಸಿದರು.