ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಸ್ಮರಣೋತ್ಸವ
ಬೀದರ್ ಫೆ 28: ಇಂದಿನ ಯುವಕರÀಲ್ಲಿ ದೇಶ ಭಕ್ತಿಯ ಭಾವನೆ ಕಾಣದಿರುವುದು ದುಖ:ಕರ ಸಂಗತಿಯಾಗಿದೆ. ಇಂದಿನ ಯುವಕರೇ ನಾಳಿನ ಪ್ರಜೆಗಳಾಗುತ್ತಾರೆ ಆದರಿಂದ ಯುವಕರು ಯಾವುದೇ ಅಡ್ಡದಾರಿಯಲ್ಲಿ ನಡೆಯದೆ ದೇಶ ಭಕ್ತಿಯನ್ನು ಮೈಗೂಡಿಕೊಳ್ಳಬೇಕು ಎಂದು ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸುನೀಲ ಭಾವಿಕಟ್ಟಿ ಹೇಳಿದರು.
ಅವರು ಇಂದು ನಗರದ ಚಂದ್ರಶೇಖರ್ ಆಜಾದ್ ಯುವ ಸಂಘದಿಂದ ಫೆ. 27 ರಂದು ಮಂಗಳವಾರ ಬೆಳಿಗ್ಗೆ ಆಜಾದ್ ಅವರ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಆಜಾದ್ ಯುವ ಸಂಘದ ಅಧ್ಯಕ್ಷರಾದ ವಿಜಯ ಭಂಡೆ, ಪ್ರದೀಪ್ ಬಿರಾದಾರ್, ವಿವೇಕ ಲಕಶೇಟ್ಟಿ, ಅನೀಲಕುಮಾರ, ಡಾವಿಡ ಕೆಂಪೆ, ಶಶಿಕಾಂತ ಭಾವಿಕಟ್ಟಿ, ಅಜಯ ದೀನೆ, ಹರ್ಷ ವರ್ಧನ್, ಶಶಿ ಬಿರಾದರ್, ಪಿಂಟು ಜಾಗಿರದಾರ್, ಸಚೀನ್ ಇತರರು ಇದ್ದರು.