ಸಾಹಿತ್ಯ ಪ್ರೇಮಿ ನಾಡು ನುಡಿಗಳ ಬಗ್ಗೆ ಅಪಾರ ಜ್ಞಾನ ಸಂಪನ್ನರಾಗಿದ್ದ ರಾಜ ನೃಪತುಂಗ ಚಕ್ರವರ್ತಿ: ಡಾ.ಎಂ.ಜಿ.ದೇಶಪಾಂಡೆ
ಸೇಡಂ, ಫೆ,28: ಪರಾಕ್ರಮ ಧರ್ಮಸಹಿಷುಣತೆಗಳ ಸಕಾರ ಮೂರ್ತಿಯಾಗಿದ್ದ ನೃಪತುಂಗ ಚಕ್ರವರ್ತಿ ಸಾಹಿತ್ಯ ಪ್ರೇಮಿ ಆಗಿದ್ದ ಸರಸ್ವತಿ ತೀರ್ಥಾವತಾರ ಎಂದೆ ವರ್ಣಸಲಾಗಿರುವ ಈತನ ಆಸ್ಥಾನದಲ್ಲಿ ಅನೇಕ ಜನ ವಿದ್ವಾಂಸರಿದ್ದರು,ನಾಡು ನುಡಿಗಳ ಬಗ್ಗೆ ಅಪಾರ ಜ್ಞಾನ ಸಂಪನ್ನರಾಗಿದ್ದ ರಾಜಧಾನಿ ಮಾನ್ಯಖೇಟ ರಾಜ ನೃಪತುಂಗ ಚಕ್ರವರ್ತಿ ಎಂದು ಡಾ.ಎಂ.ಜಿ.ದೇಶಪಾಂಡೆ ಹೇಳಿದರು.ಪಟ್ಟಣದ ಜಂಗಮ ಓಣಿಯಲ್ಲಿರುವ ಶ್ರೀ ಶಿವಶಂಕರೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದ್ರನ ರಾಜಧಾನಿಯನ್ನು ನಾಚಿಸುವಂತಹ ರಾಜಧಾನಿ ಮಾನ್ಯಖೇಟ ಅರಬ್ ಪ್ರವಾಸಿ ಸುಲೈಮಾನನು
ಅಮೋಘ ವರ್ಷ ನೃಪತುಂಗನ ಸಾಮ್ರಾಜ್ಯವನ್ನು ಜಗತ್ತಿನ ನಾಲ್ಕು ಹಿಂದೂ ಸಾಮ್ರಾಜ್ಯಗಳಲ್ಲಿ ಒಂದು ಎಂದು
ಪ್ರಶಂಸಿಸಿದ್ದಾರೆ. ನೃಪತುಂಗ ಚಕ್ರವರ್ತಿ ರಾಜ ಸಭೆಯಲ್ಲಿ ಮಾರ್ಗದರ್ಶನ ಮಾಡುವಷ್ಟು ಸಾಮಥ್ರ್ಯನಾಗಿದ್ದ, ಕವಿರಾಜಮಾರ್ಗ ಒಂದು ಅಲಂಕಾರ ಕೃತಿ ಸಮೃದ್ಧವಾಗಿದ್ದ ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಲಕ್ಷಣಗ್ರಂಥ ಕನ್ನಡದಲ್ಲಿ ಕಾವ್ಯ ರಚನೆ ಮಾಡಬೇಕೆನ್ನುವ ಕವಿಗಳಿಗಾಗಿ ಕಳೆದ ಒಂದು ಕೈಪಿಡಿ ಎಂದರು, ಕವಿರಾಜ ಮಾರ್ಗಕಾರನು ನೃಪತುಂಗನ ಸಭಾಸದನಾಗಿದ್ದು ಅವನಲ್ಲಿ ಅತ್ಯಂತ ಆದರವುಳ್ಳವನಾಗಿದ್ದನು, ಕವಿರಾಜ ಮಾರ್ಗಕಾರನು ಜೈನ್ ಮತೀಯ ಶ್ರೀ ವಿಜಯನ ಕವಿರಾಜ ಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿಗವೆ ಎಂದು ಅವರು ಹೇಳಿದರು. ಶ್ರೀ ಶಿವಶಂಕರೇಶ್ವರ ಮಠದ ಶ್ರೀಗಳಾದ ಷ.ಬ್ರ.ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನನೀಡಿದರು. ಕನ್ನಡದೇಳಿಗೆಗೆ ರಾಷ್ಟ್ರಕೂಟರ ಕೊಡುಗೆ ಕುರಿತು ಅನಿಲಕುಮಾರ ಸಕ್ತಿ ಉಪನ್ಯಾಸ ನೀಡಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ್ವರ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು,ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರಾಂತ ಸಹಕಾರದರ್ಶಿ ಡಾ.ಶಿವಶರಣ ಗೋಡ್ರಾಳ್ ವನದುರ್ಗ ಪ್ರಾಸ್ತಾವಿಕ ಮಾತನಾಡಿದರು,ಸಾಹಿತಿ ಪ್ರಭಾಕರ ಜೋಶಿ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷರ ಸಿದ್ದಪ್ಪ ತಳ್ಳಳ್ಳಿ,
ಹಿರಿಯ ಸಾಹಿತಿ ವೀರಯ್ಯ ಸ್ವಾಮಿ ಮಠಪತಿ, ಶಿವಶಂಕರೇಶ್ವರ ಮಠದ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಭಂಡಾ, ವಿಠಲ್ ಭರಮಕರ, ದೇವೇಂದ್ರಪ್ಪ ಮೇಳಕುಂದಿ, ಶೃತಿ ಚರಂತಿಮಠ ಸೇರಿದಂತೆ ಇನ್ನಿತರರು ಇದ್ದರು. ಶಿವಪ್ರಸಾದ ವಿಶ್ವಕರ್ಮ ಪ್ರಾರ್ಥಿಸಿದರು.ಶಿವಕುಮಾರ ಸ್ವಾಮಿ ಹಿರೇಮಠ ಸ್ವಾಗತಿಸಿದರು, ಪ್ರಕಾಶ ಗೋಣಗಿನಿರೂಪಿಸಿದರು, ಮಂಜುನಾಥ ಸ್ವಾಮಿ ಭಂಡಾ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ : ಅಖಿಲ ಭಾರತೀಯ ಸಾಹಿತ್ಯ
ಪರಿಷತದ್ ಜಿಲ್ಲಾ ಉಪಾಧ್ಯಕ್ಷರಾಗಿ ಅನಿಲಕುಮಾರ ಸಕ್ರಿ, ತಾಲೂಕ ಅಧ್ಯಕ್ಷರಾಗಿ ಶಿವಕುಮಾರ ಸ್ವಾಮಿ ಹಿರೇಮಠ,
ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ ಪಾಟೀಲ ಬಿಜ್ಜನಳ್ಳಿ, ಖಜಾಂಚಿ ಶರಣಯ್ಯ ಸ್ವಾಮಿ ಹಿರೇಮಠ ಬೊಮ್ನಳ್ಳಿ ಅವರನ್ನು ಪ್ರಾಂತ ಸಹ ಕಾರ್ಯದರ್ಶಿ ಡಾ.ಶಿವಶರಣ ಗೋಡ್ರಾಲ್ ವನದುರ್ಗ ಅವರು ಆಯ್ಕೆ ಮಾಡಿದರು.