ಮನ ತಣಿಸಿದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ
ವಿಜಯಪುರ:ಫೆ.28:ನಗರದ ಸುರಸಿಂಗಾರ ಕಲೆ ಮತ್ತು ಸಾಂಸ್ಕøತಿಕ ಸಂಸ್ಥೆ ಭಾನುವಾರ ಕÀಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ದಿ. ಶ್ರೀ ಭೋಜಣ್ಣ ಬೀಳಗಿಯವರ ಸ್ಮರಣಾರ್ಥ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
ದೆಹಲಿಯ ಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪಂ. ಹರೀಶ ತಿವಾರಿ ಅವರು ರಾಗ ಭಾಗ್ಯಶ್ರೀ, ಠೂಮರಿ, ಮತ್ತು ಭೈರವಿಯಲ್ಲಿ ತಮ್ಮ ಶಾಸ್ತ್ರೀಯ ಗಾಯನದ ಜೊತೆಗೆ ಅಭಂಗ್ ಮತ್ತು ಭಜನ ಪ್ರಸ್ತುತಪಡಿಸಿ ನೆರೆದ ಸಂಗೀತಾಸ್ತರ ಮನ ತಣಿಸಿದರು.
ಪಂ. ಸಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ಹಾಗೂ ಡಾ. ರವಿಕಿರಣ ನಾಕೋಡ ಅವರು ತಬಲಾ ಸಾತ್ ಮತ್ತು ತಾನಪುರದಲ್ಲಿ ವಿಶಾಲ ಕಟ್ಟಿ, ಕಾಶಿನಾಥ ಭೋಸಲೆ ಸಾಥ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ಕಾರ್ಯಕ್ರಮಲ್ಲಿ ಡಾ. ಸತೀಶ ಜಿಗಜಿನ್ನಿ, ವಿಶ್ವನಾಥ ಬೀಳಗಿ, ಅರುಣ ಸೋಲಾಪೂರಕರ, ತ್ರೀವೇಣಿ ಬೀಳಗಿ, ಸಂಗಣ್ಣ ಪಾಟೀಲ, ರಮೇಶ ಚವ್ಹಾಣ, ಪಿ.ಎಸ್. ಕಡೇಮನಿ, ವಿದ್ಯಾಧರ ಸಾಲಿ, ಬಿ.ಎಸ್. ಪಾಟೀಲ, ಲಿಂಗರಾಜ ಕಾಚಾಪೂರ, ಡಾ. ಸದಾಶಿವ ಪವಾರ ಸಹಿತ ವಿಜಯಪುರದ ಎಲ್ಲ ಸಂಗೀತ ಆಸಕ್ತರು ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.