ಗಜಾನನ ದೇವಸ್ಥಾನ ಉದ್ಘಾಟನೆ
ವಿಜಯಪುರ,ಫೆ.28:ನಗರದ ಸ್ಟೇಶನ್ ರಸ್ತೆಯ ಭೋವಿ (ವಡ್ಡರ) ಸಮಾಜದವರಿಂದ ನಿರ್ಮಿಸಿದ ನೂತನ ಶ್ರೀ ಗಜಾನನ ದೇವಸ್ಥಾನ ಉದ್ಘಾಟನೆಯನ್ನು ಬಾಗಲಕೋಟೆ- ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ನೆರವೇರಿಸಿದರು. ಕಳಸಾರೋಹಣವನ್ನು ಜ್ಞಾನಯೋಗಾಶ್ರಮ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ನೆರವೇರಿಸಿದರು. ನಾಗಪ್ಪ ಗುಜ್ಜಲಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಯುವಕರಿಂದ ಹಾಗೂ ಇನ್ನಿತರ ಸಮಾಜಗಳ ಸಹಕಾರದಿಂದ ದೇವಸ್ಥಾನ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಅವರ ಪುತ್ರ ರಾಮನಗೌಡ ಪಾಟೀಲ (ಯತ್ನಾಳ) ಮಾತನಾಡಿ. ಸ್ವಂತ ಮನೆ ಇಲ್ಲದ ಬಡವರು ಸರಕಾರಕ್ಕೆ ಅರ್ಜಿ ಸಲ್ಲಿಸುವದರ ಮೂಲಕ ಮನೆಗಳನ್ನು ಪಡೆಯಲು ತಿಳಿಸಿದರು. ಪಾಲಿಕೆ ಉಪ ಮಹಾಪೌರ ದಿನೇಶ ಹಳ್ಳಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಮಾತನಾಡಿ, ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಮಾತನಾಡಿದರು.
ಬಸವರಾಜ ಗೊಳಸಂಗಿ, ಪ್ರಶಾಂತ ಲಾಳಸಂಗಿ, ಪ್ರಕಾಶ ನಾಯ್ಕೋಡಿ, ರಾಜು ಕಾಳೆ, ಕುಂಚಿಕೊರವರ ಸಮಾಜದ ಅಧ್ಯಕ್ಷ ದುರ್ಗಪ್ಪ ಪಡಗಾನೂರÀು, ಕೈಲಾಸ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
ಓಣಿಯ ಹಿರಿಯರಾದ ರಾಜಾರಾಮ ಕೊಣ್ಣೂರಕರ, ನಾಗನಾಥ ಇರಕಲ್, ಪರಶುರಾಮ ಆಲಕುಂಟೆ, ಮರಗು ಕೊಣ್ಣೂರಕರ, ಲಕ್ಷ್ಮಣ ಚಾಕ್ರಿ, ರವಿ ಆಲಕುಂಟೆ, ಸಾಬಣ್ಣ ಮುರಾಳ, ರಮೇಶ ಮ್ಯಾಗೇರಿ, ಯುವಕರಾದ ಮಾರುತಿ ಆಲಕುಂಟೆ, ಸಾಯಿಕುಮಾರ ಕೊಣ್ಣೂರಕರ, ನಾಗರಾಜ ಬಿಸನಾಳ, ಫÀಕೀರಚಂದ ಇರಕಲ್, ಸಂಜಯ ಇರಕಲ್, ಅಶೋಕ ತಾರನಾಳ, ಲಕ್ಷಣ ಆಲಕುಂಟೆ, ಯುವರಾಜ ಕೊಣ್ಣೂರಕರ, ರವಿಕುಮಾರ ಬಿದರಕುಂದಿ, ವೆಂಕಟೇಶ ಪಾತ್ರೋಟ, ಪ್ರಕಾಶ ಮ್ಯಾಗೇರಿ, ಶಶಿಕಾಂತ ಮ್ಯಾಗೇರಿ ಹಾಗೂ ಇತರರು ಇದ್ದರು.