ಮೌಲ್ಯಾಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಪರಿವರ್ತಿಸುವುದೆ ನಿಜವಾದ ಶಿಕ್ಷಣದ ಗುರಿಯಾಗಬೇಕು : ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಸಲಹೆ
ಆಲಮೇಲ:ಫೆ.28:ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ ಅದು ವಿದ್ಯಾರ್ಥಿಯಲ್ಲಿ ಜ್ಞಾನವನ್ನು ಒಡಮೂಡಿಸುವದರೊಂದಿಗೆ ವರ್ತನೆ,ನಡುವಳಿಕೆ,ಬದುಕುವ ಕಲೆ,ಕೌಶಲ್ಯ.ಮೌಲ್ಯಗಳು,ನಡೆ-ನುಡಿ,ಆಚಾರ ವಿಚಾರ,ಸಂಸ್ಕøತಿ-ಸಂಸ್ಕಾರ ಮತ್ತು ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನ್ನಾಗಿ ಪರಿವರ್ತಿಸುವುದೆ ನಿಜವಾದ ಶಿಕ್ಷಣದ ಗುರಿಯಾಗಬೇಕು ಎಂದು ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಪಾಲಕರಿಗೆ ಸಲಹೆ ನಿಡಿದರು.
ಸೋಮವಾರ ಪಟ್ಟಣದ ಭೀಮಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ವಿಶೇಷ ಸನ್ಮಾನಿತರಾಗಿ ಭಾಗವಹಿಸಿ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.
ನಂತರ ಕನ್ಯಾ ಪ್ರೌಢ ಶಾಲೆಯ ಮುಖ್ಯೋಪಾದ್ಯ ರವಿ ಹೊಸಮನಿ ಮಾತನಾಡಿ ಇಂದಿನ ಸ್ಪರ್ಧಾಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದೇ ಆದರೆ ಮುಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ದೇವರಗುಡ್ಡದ ಒಡೆಯರಾದ ಡಾ,ಸಂದೀಪ ಪಾಟೀಲ ವಿದ್ಯಾರ್ಥಿಗಳು ತಮ್ಮ ನಿತ್ಯದ ಜೀವನದಲ್ಲಿ ಸಮಯ ಪ್ರಜ್ಞೆ ಹಾಗೂ ಶಿಸ್ತುಬದ್ದತೆ ಕಾಯ್ದುಕೊಳ್ಳುವದರ ಜೊತೆಗೆ ಅಭ್ಯಾಸದ ಕಡೆ ಹೆಚ್ಚಿನ ಆಶಕ್ತಿ ವಹಿಸಬೇಕು ಎಂದುಆಶೀರ್ವಚನ ನಿಡಿದರು,
ಕಾರ್ಯಕ್ರಮದಲ್ಲಿ ರಾಮಪೂರ ಆರೂಢಮಠದ ನಿತ್ಯಾನಂದ ಮಹಾರಾಜರು, ಬಂಕಲಗಾ ಹಿರೇಮಠದ ಮಲ್ಲಯ್ಯಾ ಸ್ವಾಮಿಜಿ ಸಮ್ಮುಖ ವಹಿಸಿದರು. ಶಾಸಕ ಅಶೋಕ ಮನಗೂಳಿಯವರ ಪುತ್ರ ಕುಮಾರ ಮನಗೂಳಿ, ಸಂಸ್ಥೆಯ ಅಧ್ಯಕ್ಷ ಡಾ,ಸಂಜೀವಕುಮಾರ ಯಂಟಮನ, ಸಿಂದಗಿಯ ನ್ಯಾಯವಾದಿ ಅಶೋಕ ಗಾಯಕವಾಡ,ರಮೇಶ ಬಂಟನೂರ, ದೌಲಪ್ಪ ಸೋನ್ನ, ಸುರೇಶ ಹಲ್ಲೂರ,ಗ್ರಾಪಂ ಮಾಜಿ ಅಧ್ಯಕ್ಷ ಅಯೂಬ ದೇವರಮನಿ,ಪಪಂ ಸದಸ್ಯ ಅಶೋಕ ಕೊಳಾರಿ,ವಹಾಬ ಸುಂಬಡ, ಮುಖ್ಯ ಗುರುಮಾತೆ ಪುಷ್ಪಾ,ಪಿ(ಕೇರಳ) ಶಿಕ್ಷಕಿಯರಾದ, ಅರ್ಚನಾ,ಶ್ರವಣಾ,ಅಶ್ವೀನಿ,ಪ್ರವಲೀಕಾ,ಅಮೃತಾ,,ದೀಪಾ,,ಶಾಬಿನ್ ಹಾಗೂ ಯಲ್ಲಪ್ಪ, ವಾಯ್ ಹಾಗೂ ಪಾಲಕ ಪ್ರತಿನಿಧಿಗಳು ವಿದ್ಯಾರ್ಥಿಗಳು ಉಪಸ್ಥಿತ್ತರಿದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವನ್ನು ಇಂಜೀನಿಯರ ಶ್ರೀಶೈಲ ಮಠಪತಿ ನಿರೂಪಿಸಿದರು.