ಶ್ರವಣ ಸಾಧನ ಸಲಕರಣೆಗಳ ವಿತರಣೆ
ಕಲಬುರಗಿ: ಫೆ.28:ನಗರದ ಸೇವಾಸಂಗಮ ಸಂಸ್ಥೆ ಹಾಗೂ ಅಜೀಂ ಪ್ರೇಮ್‍ಜಿ ಫೌಂಢೇಶನ, ಕಲಬರುಗಿ ಇವರ ಸಂಯುಕ್ತ ಆಶ್ರಯದಲ್ಲಿ “ಶ್ರವಣ ಸಾಧನಾ ಸಲಕರಣೆಗಳ ವಿತರಣೆ ಕಾರ್ಯಕ್ರಮ ಹಾಗೂ ಶಿಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಕುರಿತು ಆಶಾ ಕಾರ್ಯಕರ್ತೆಯರಿಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಸೇವಾ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೋಳ್ಳಲಾಯಿತು.”
ಶ್ರವಣ ನ್ಯೂನತೆಯುಳ್ಳ ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಿ ಮಾತನಾಡಿದ ಪರಮ ಪೂಜ್ಯ ಬಿಷಪ್ ರಾಬರ್ಟ ಮೈಕಲ್ ಮಿರಂದ ಧರ್ಮಧ್ಯಕ್ಷರು, ಕಲಬರುಗಿ ಧರ್ಮ ಕ್ಷೇತ್ರ ಹಾಗೂ ಸೇವಾ ಸಂಗಮ ಸಂಸ್ಥೆಯ ಅಧ್ಯಕ್ಷರು ಇವರು ಅನೇಕ ಸಂಕಷ್ಟಗಳಿಗೆ ಸಿಲುಕಿ ಬಡವರು ಸಮಾಜದ ಮುಖ್ಯವಾಹಿನಿಗೆ ಬರದೆ ಸಮಾಜದಲ್ಲಿ ಮೂಲೆ ಗುಂಪಾಗಿದ್ದಾರೆ, ಅಂತಹ ಜನರ ಏಳಿಗೆಗಾಗಿ ಸೇವಾಸಂಗಮ ಸಂಸ್ಥೆ ಹಲವಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದೆ. ಇಂತಹ ಜನರ ಅಭಿವೃದ್ಧಿಗಾಗಿ ಸೇವೆಯನ್ನು ನೀಡಲು ಸಂಸ್ಥೆಯ ಕಾರ್ಯಕರ್ತರು ಜನರೊಂದಿಗೆ ಬೇರೆತು ಕಾರ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಾವು ಇಗಾಗಲೇ ಅವರೊಂದಿಗೆ ಬೆರೆತು ಅನೇಕ ಸೇವೆಯನ್ನು ಒದಗಿಸುತ್ತಿರುವುದು ಹಾಗೂ ನಮಗಿಂತ ತಾವು ಅವರಿಗೆ ಹತ್ತಿರದಲ್ಲಿರುವುದು ಸಂಸ್ಥೆಯ ಗಮನಕ್ಕೆ ಬಂದಿರುತ್ತದೆ. ಸೇವಾಸಂಗಮ ಸಂಸ್ಥೆಯ ಉದ್ದೇಶ ಶೀಘ್ರವಾಗಿ ಅಂತಹ ಮಕ್ಕಳನ್ನು ಪತ್ತೆ ಹಚ್ಚುವುದು ಹಾಗೂ ಅವರಿಗೆ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸುವುದಾಗಿದೆ ಆದ್ದರಿಂದ ತಮ್ಮನ್ನು ಸಂಸ್ಥೆಯವರು ಗುರುತಿಸಿ ಕಾರ್ಯಕ್ಷೇತ್ರೆದಲ್ಲಿ ಸಹಾಯವಾಗಲು ಹಾಗೂ ಇನ್ನೂ ಹೆಚ್ಚಿನ ಸೇವೆ ನೀಡುವ ಉದ್ದೇಶದಿಂದ ತಮಗೆ ತರಬೆತಿಗಳನ್ನು ಆಯೋಜನೆ ಮಾಡಿದ್ದಾರೆ ಇದರ ಸದುಪಯೋಗವನ್ನು ತಾವೇಲ್ಲರು ಪಡೆದು ಕೋಳಬೇಕು ಇಂತಹ ಸಂಸ್ಥೆಯೊಂದಿಗೆ ಕೈ ಜೋಡಿಸಿದರೇ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯನ್ನು ಒದಗಿಸಲು ಸಹಾಯವಾಗಲಿದೆ ಎಂದರು.
ಶ್ರೀ ವಿರೂಪಾಕ್ಷಯ್ಯಾ ಹಿರೇಮಠ ಆರೋಗ್ಯ ನಿರೀಕ್ಷಣ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಫರಹತಬಾದ ಇವರು ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿ ಸೇವಾ ಸಂಗಮ ಸಂಸ್ಥೆಯ ಸೇವೆಯು ಶ್ಲಾಘನಿಯವಾಗಿದೆ. ಬೇಳವಣಿಗೆಯಲ್ಲಿ ಕುಂಠಿತ ಗೊಂಡಿರುವ ಮಕ್ಕಳನ್ನು ಗುರುತಿಸುವುದು ಹಾಗೂ ಅಂತಹ ಮಕ್ಕಳ ಪಾಲರಿಗೆ ಅರಿವನ್ನು ನೀಡುವ ಮೂಲಕ ಅಂತಹ ಮಕ್ಕಳ ವಿಶ್ಲೇಷಣೆಯನ್ನು ಮಾಡಿ ಮಗುವಿಗೆ ಇರುವ ನ್ಯುನತೆಯನ್ನು ಗುರುತಿಸಿ ಆ ನ್ಯೂನತೆಗೆ ತಕ್ಕ ಉತ್ತೇಜಕ ಚಟುವಟಿಕೆಯನ್ನು ನೀಡುವ ಮೂಲಕ ಮಕ್ಕಳಲ್ಲಿ ಬದಲಾವಣೆಯನ್ನು ತರುವ ಕಾರ್ಯವನ್ನು ಈ ಸಂಸ್ಥೆಯವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನಿಯವಾಗಿದೆ ಕಾರ್ಯವಾಗಿದೆ ಎಂದು ಹೇಳಿದರು.
ಶ್ರೀಮತಿ ಗೀತಾ .ಎಚ್. ಆಡಳಿತ ವೈಧ್ಯಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ , ಹೊನ್ನಕಿರಣಗಿ ಇವರು ಮಾತನಾಡಿ ಸೇವಾ ಸಂಗಮ ಸಂಸ್ಥೆ ಗ್ರಾಮೀಣ ಭಾಗದ ಜನರ ಅಭಿವೃದ್ಧಿಗಾಗಿ ಕಾರ್ಯವನ್ನು ನಿರ್ವಹಿಸುತ್ತಿರುವುದು ಹಾಗೂ ಸಮಾಜದ ಕಟ್ಟ* ಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಮಾಡುತ್ತಿದೆ, ಬೇಳವಣಿಗೆಯಲ್ಲಿ ಕುಂಠಿತ ಗೊಂಡಿರುವ ಮಕ್ಕಳ ಭವಿಷ್ಯಕ್ಕಾಗಿ ಪ್ರಾರಂಭದಲಿಯೆ ಗುರತಿಸುವ ಮೂಲಕ ಅವರನ್ನು ನ್ಯುನತೆ ಮುಕ್ತ ಮಕ್ಕಳನ್ನಾಗಿ ಮಾಡುವಲ್ಲಿ ಕಠಿಣ ಶ್ರಮವನ್ನು ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡು ವಂದನಿಯ ಫಾದರ ವಿಕ್ಟರ್ ವಾಸ್ ನರ್ದೇಶಕರು ಸೇವಾಸಂಗಮ ಸಂಸ್ಥೆ, ಕಲಬರುಗಿ ಇವರು ಕಾರ್ಯಕ್ರಮವನು ಉದ್ದೇಶಿಸಿ ಮಾತನಾಡಿ ಸೇವಾ ಸಂಗಮ ಸಂಸ್ಥೆ ಕಲಬರುಗಿ ಜಿಲ್ಲೆಯಲ್ಲಿ 17 ವರ್ಷಗಳಿಂದ ಸಮಾಜದ ಅಭಿವೃದ್ಧಿಗಾಗಿ ಅನೇಕ ರೀತಿಯಾ ಕಾರ್ಯಗಳನ್ನು ನಿರ್ವಹಿಸುತ್ತಿದೆ ಅದರಲ್ಲಿ ವಿವಿದ ರೀತಿಯಾ ಕಾರ್ಯಕ್ರಮಗಳ ಮೂಲಕ ರೈತರ ಏಳಿಗಾಗಿ, ಮಹಿಳೆಯ ಸ್ವಾಲಂಬನೆ ಜೀವನಕ್ಕಾಗಿ, ಕಿಶೋರಿಯರ ವಯಕ್ತಿ ಸ್ವಚ್ಛತೆ ಹಾಗೂ ಅವರ ಸಬಲಿಕರಣಕ್ಕಾಗಿ ಹಾಗೂ ಬೆಳವಣಿಗೆಯಲ್ಲಿ ಕುಂಠಿತ ಗೊಂಡಿರುವ ಮಕ್ಕಳ ಅಭಿವೃದ್ಧಿಗಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆಯ ಮೂಲಕ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಶ್ರೀಮತಿ ಕವಿತಾ ಗುತ್ತೇದಾರ ಅವರು ಪ್ರಾರ್ಥನೆ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮದಲ್ಲಿ ಜಗದೇವಿಯವರು ಸಂವಿಧಾನದ ಪೀಠಿಕಯನ್ನು ಭೋದಿಸಿದರು, ಕಾರ್ಯಕ್ರಮದಲ್ಲಿ ಶ್ರಿಮತಿ ಗಂಗಬಾಯಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಕವಿತಾ ಗುತ್ತೇದ್ದಾರ ಪ್ರಾಥಮಿಕ ಆರೋಗ್ಯ ಸುರಕ್ಷ ಆಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಫರಹತಬಾದ, ಸುನಿತಾ ಪಾಟಿಲ್ ಆರೋಗ್ಯ ಸುರಕ್ಷ ಆಧಿಕಾರಿಗಳು, ಪ್ರಾಥಮಿಕ ಆರೊಗ್ಯ ಕೇಂದ್ರ ಹೊನ್ನಕಿರಣಗಿ. ಶ್ರೀಮತಿ ನೇತ್ರ ಸಂಪನ್ಮೂಲ ವ್ಯಕ್ತಿಗಳೂ ಸಕ್ಯ ಪೌಂಢೇಶನ್, ಬೆಂಗಳೂರು, ಶ್ರೀಮತಿ ಶ್ವೇತಾ ಕುಲಕರ್ಣಿ ಯೋಜನಾ ವ್ಯವಸ್ಥಾಪಕರು ಸೇವಾ ಸಂಗಮ ಸಂಸ್ಥೆ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಕ್ಷ್ಮಣ , ಅಶೋಕ, ಲಕ್ಷ್ಮಿ, ದಾಕ್ಷಾಯಣಿ, ಶ್ರವಣ ನ್ಯೂನತೆಯುಳ್ಳ ಮಕ್ಕಳು ಮತ್ತು ಅವರ ಪಾಲಕರು, ಪ್ರಾಥಮಿಕ ಆರೋಗ್ಯ ಕೇಂದ್ರ ಫರಹತಬಾದ ಮತ್ತು ಹೊನ್ನಕಿರಣಗಿ ಎರಡು ಕೇಂದ್ರದ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗದವರು ಒಟ್ಟು 80 ಜನರು ಭಾಗವಹಿಸಿದರು. ಕಾರ್ಯಕ್ರವನ್ನು ಶ್ರೀ ರಾಜಕುಮಾರ್ ದೇವರಮನಿ ನಿರೂಪಿಸಿ ಶ್ರಿಮತಿ ಶಿವಕಾಂತ ಸ್ವಾಗತಿಸಿ ಅನಿತಾ ವಂದಿಸಿದರು.