ಭಾರತ ಬ್ರಾಂಡ್ ಅಕ್ಕಿ ಸೇಡಂನಲ್ಲಿ ಲಭ್ಯವಿದೆ : ಡಾ.ಸೇಡಂ
ಸೇಡಂ, ಫೆ,28: ಅಕ್ಕಿ ದರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತ ಬ್ರಾಂಡ್ ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಮಾರಾಟವನ್ನು ಈಗ ಸೇಡಂನಲ್ಲಿ ಲಭ್ಯವಿದೆ ಎಂದು ಸಂಸತ್ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ ಸೇಡಂ ಹೇಳಿದರು.
ಪಟ್ಟಣದ ಶಾಸ್ತ್ರಿ ಗಂಜ್ ನಲ್ಲಿರುವ ಶ್ರೀ ವೀರಭದ್ರೇಶ್ವರ ಟ್ರೇಡರ್ ಮಳಿಗೆಯಲ್ಲಿ ಆಯೋಜಿಸಿದ್ದ ಭಾರತ್ ಬ್ರಾಂಡ್ ಅಕ್ಕಿ ಮಾರಾಟ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ
ಮಹ ಮಹತ್ವಾಕಾಂಕ್ಷಿಯ ಯೋಜನೆಯಡಿ ಭಾರತದಲ್ಲಿ ಒಂದೇ ಬ್ರಾಂಡಿನಡಿಯಲ್ಲಿ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಭಾರತ ಬ್ರಾಂಡ್ ಅಡಿಯಲ್ಲಿ ನಾಲ್ಕು ಪ್ರಮುಖ ಆಹಾರ ಸಾಮಗ್ರಿಗಳು ಮಾರಾಟಕ್ಕೆ ಲಭ್ಯವಿದ್ದು, ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಿದ್ದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.ಹಾಲಪ್ಪಯ್ಯ ವಿರಕ್ತ ಮಠದ ಶ್ರೀಗಳಾದ ಪಂಚಾಕ್ಷರ ಮಹಾಸ್ವಾಮೀಜಿ ಅವರು ಮಾತನಾಡಿ ನಿಸ್ಸಾರ್ಥ ಸಮಾಜ ಸೇವೆ ಮಾಡುವ ಮೂಲಕ ಸಮಾಜೋಪಯೋಗಿ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿ ಸೇವೆ ಸಲ್ಲಿಸುತ್ತಿರುವ ರಾಜಶೇಖರ ನಿಲಂಗಿ ಅವರ ಸೇವೆ ಶ್ಲಾಘನೀಯ ಎಂದರು, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ
ಮಾತನಾಡಿ ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಬಡವರು ಖರೀದಿಸಲು ಭಾರ ಆಗಬಾರದು ಎಂದು ಗುಣಮಟ್ಟದ ಆಹಾರ ಸೇವನೆ ಮಾಡಲಿ ಎನ್ನುವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಅಕ್ಕಿ ಮತ್ತು ಕಡಲೆ ಬೇಳೆ ವಿತರಿಸುತ್ತಿದ್ದಾರೆ.ಇದರ ಲಾಭ ಪಡೆದುಕೊಳ್ಳಬೇಕು ಹಾಗೂ ವಿತರಿಕರಿಗೆ ಪೆÇ್ರೀತ್ಸಾಹಿಸಬೇಕು ಎಂದರು, ಉದ್ಯಮಿ ಹರೀಶ ಗುತ್ತೇದಾರ ವಿಠಲ ಐನಾಪುರ ವೀರಶೈವ ಸಮಾಜದ ಮುಖಂಡ ಶರಣಪ್ಪ ನೀಲಂಗಿ ಉದ್ಯಮಿ ರಾಜಶೇಖರ ನೀಲಂಗಿ ಶಿವಕುಮಾರ ಪಾಟೀಲ ತೆಲ್ಕೂರ ಮಹೇಶ ನೀಲಂಗಿ ಸೇರಿದಂತೆ ಇತರರಿದ್ದರು, ಸಂಗಣ್ಣ ಅಲ್ಲೆ ಸ್ವಾಗತಿಸಿ ನಿರೂಪಿಸಿದರು.