ಅಭಿಮಾನಿಗಳು ಕಾರ್ಯಕರ್ತರು ಪಕ್ಷ ಸಂಘಟಿಸಿ ;  ಜಿ.ಬಿ ವಿನಯ್ ಕುಮಾರ್

ಸಂಜೆವಾಣಿ ವಾರ್ತೆ
ಜಗಳೂರು.ಫೆ.೨೮;:- ದಾವಣಗೆರೆ ಕ್ಷೇತ್ರದಿಂದ ಲೋಕಸಭೆಯ ಟಿಕೆಟ್ ತಂದೇ ತರುವೆ ಗೊಂದಲ ಬೇಡ ಪಕ್ಷ ಸಂಘಟನೆಯಲ್ಲಿ ನಿರತ ರಾಗಿ ಲೋಕಸಭೆ ಆಕಾಂಕ್ಷಿ ವಿನಯ್ ಕುಮಾರ್ ಅಭಿಮಾನಿ ಗಳಿಗೆ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.ಟಿಕೆಟ್ ತಂದೆ ತರುತ್ತೇನೆ ಎಂದು ಆಶಾ ಭಾವನೆಯಲ್ಲಿ ಹೇಳು ತ್ತಿದ್ದೇನೆ ಎಂದು ಅಡ್ಡ ದಾರಿಯಿಂದ ಸೂಟ್‌ಕೇಸ್ ಮೂಲಕ ಟಿಕೆಟ್ ತರುತ್ತೇನೆ ಎಂದು ತಿಳಿದುಕೊಳ್ಳಬೇಡಿ, ನನ್ನಗೆ ಅಹರ್ತೆ ಇದೆ,ಮೆರಿಟ್ ಇದೆ, ಜನರ ಬೆಂಬಲ ಇದೆ ಆದರ ಮೇಲೆ ದೃಢವಾದ ನಂಬಿಕೆ ಇದೆ ಆದ್ದರಿಂದ ಟಿಕೆಟ್ ತರುತ್ತೇನೆ ಎಂದು ಹೇಳುತ್ತಿದ್ದೇನೆ ಎಲ್ಲಾ ಕಾರ್ಯಕರ್ತರು ಅಭಿಮಾನಿಗಳು ಪಕ್ಷ ಸಂಘಟನೆ ಮಾಡುವಲ್ಲಿ ನಿರತರಾಗಿ ಎಂದು ಕರೆ ನೀಡಿದರು.ಟಿಕೆಟ್ ಯಾವ ಕ್ಷೇತ್ರಕ್ಕೂ ಅಂತಿಮವಾಗಿಲ್ಲ,ಯಾರು ಗೊಂದಲ ದಿಂದ ಇರಬೇಡಿ, ನನ್ನಗೆ ಸಂಪೂರ್ಣವಾಗಿ ನಂಬಿಕೆ ಇದ್ದು, ಟಿಕೆಟ್ ಸಿಗುವ ನಿರೀಕ್ಷೆ ಇದೆ ಕೊನೆ ಹಂತದಲ್ಲಿ ಟಿಕೆಟ್ ವಂಚಿತ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅತ್ಯಂತ ದೊಡ್ಡ ದ್ರೋಹ ಎಂದರು.ನಾಯಕರ ಜೊತೆ ಸುತ್ತಾಡಿದರೆ ನಾಲಾಯಕ್ ಆಗುತ್ತವೆ, ಸಾಮಾನ್ಯರ ಜನರ ಮಧ್ಯೆ ಸುತ್ತಾಡಿದರೆ ಜನನಾಯಕ ನಾಗು ತ್ತನೆ ಎಂಬ ಮಾತಿನಲ್ಲಿ ನಂಬಿಕೆ ಇಟ್ಟುಕೊಂಡು ರಾಜಕೀಯ ಹಾದಿಯಲ್ಲಿ ಸಾಗುತ್ತಿದ್ದೇನೆ ಸಾಮಾನ್ಯ ಜನರೇ ನನ್ನ ಶಕ್ತಿ ಎಂದರು.ಪಾದಯಾತ್ರೆಯಲ್ಲಿ ಎಲ್ಲಾ ಗ್ರಾಮಗಳಲ್ಲಿನ ಶಾಲೆಗೆ ಭೇಟಿ ನೀಡಿ ಶಾಲೆಯ ಸಮಸ್ಯೆಗಳು ಸೂಕ್ಷ್ಮವಾಗಿ ನೋಡಿ ತಿಳಿದ್ದೇನೆ ಆ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಕಾರ್ಯ ಮಾಡುವೆ ಎಂದರು.ಈ ಸಂದರ್ಭದಲ್ಲಿ ಪ್ರಕಾಶ್ ರೆಡ್ಡಿ. ಕಲ್ಲೆದೇವರಪುರ ಕೊಟ್ಟಿಗೆ ತಿಪ್ಪೇಸ್ವಾಮಿ.ಯಾದವ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ. ಸರ್ಕಲ್ ಕಾಟಪ್ಪ. ರಂಗನಾಥ ರೆಡ್ಡಿ. ನಂಜುಂಡಸ್ವಾಮಿ.ಯು.ಜಿ ಶಿವಕುಮಾರ್ ನರೇನಹಳ್ಳಿ ಕುಮಾರ ನಾಯ್ಕ್, ಮರೇನಹಳ್ಳಿ ನಾಗರಾಜ್. ರೇಣುಕೇಶ್, ಗುಡ್ಡದ ನಿಂಗಣ್ಣನಹಳ್ಳಿ ನಾಗರಾಜ್. ಗೋಗುದ್ದು ಅನ್ವರ್. ತಿಮ್ಮೆಶ್.ಲೋಕೇಶ್.ರವಿ, ಒಬಳೇಶ್, ಬಸವರಾಜ್. ತಿಮ್ಮೆಶ್. ಮಲ್ಲಿಕಾರ್ಜುನ್.ಕೆಳಗೋಟೆ ಬದ್ರಿ.ನಾಗರಾಜ್. ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.