ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿದಲಿತ ಸಂಸ್ಕೃತಿಯನ್ನು ಹೆಕ್ಕಿ ತೋರಿದವರು ಎಸ್.ಎಸ್.ಹಿರೇಮಠ
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.28: ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ದಲಿತ ಸಂಸ್ಕೃತಿಯನ್ನು ಹೆಕ್ಕಿ ತೋರಿಸಿದ  ಹೆಗ್ಗಳಿಕೆ ಪ್ರೊ. ಎಸ್ಎಸ್. ಹಿರೇಮಠ್ ರವರಿಗೆ ಸಲ್ಲುತ್ತದೆ ಎಂದು ಸೌಹಾರ್ದ ವೇದಿಕೆಯ ರಾಜ್ಯ ಸಂಚಾಲಕ ಹಾಗೂ ಜನಶಕ್ತಿ ಪತ್ರಿಕೆಯ ಸಂಪಾದಕ ಡಾ. ಎಸ್.ವೈ. ಗುರುಶಾಂತ್ ತಿಳುಸಿದರು.
ನಗರದ ಗಾಂಧಿ ಭವನದಲ್ಲಿ ಸಮಾಜ ವಿಜ್ಞಾನ ವೇದಿಕೆ ಹಾಗೂ ಬಂಡಾಯ ಸಾಹಿತ್ಯ ಸಂಘಟನೆ  ಹಮ್ಮಿಕೊಂಡಿದ್ದ , ಎಸ್.ಎಸ್. ಹಿರೇಮಠ್, ಹಾಗೂ ಶೇಷಗಿರಿರಾವ್  ಪ್ರಶಸ್ತಿ ಹವಾಲ್ದಾರ್ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಪ್ರಶಸ್ತಿಗಳು ಸರಕಾರ ಕೊಡಮಾಡುವ ಪ್ರಶಸ್ತಿಗಿಂತ ಎತ್ತರಕ್ಕೆ ನಿಲ್ಲುವಂತಹವು. ಇವುಗಳಿಗೆ ಭಾಜನರಾದ ಲೇಖಕರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರಲ್ಲದೆ, ನೆಲಮೂಲ ಸಂಸ್ಕೃತಿ ದ್ವಂಸಗೊಳ್ಳುತ್ತಿರು ಇಂದಿನ ಸಂದರ್ಭದಲ್ಲಿ  ಪ್ರತಿಯೊಬ್ಬ ಲೇಖಕರು ಹಿರೇಮಠ್ ಹಾಗೂ ಶೇಷಗಿರಿಯವರ  ಕೃತಿಗಳನ್ನು ಅಧ್ಯನಮಾಡುವ ಅಗತ್ಯವಿದೆ ಎಂದರು. ಸನ್ಮಾನಿತರ ಪರಿಚೆಯವನ್ನು ಭಾರತಿ ಮೂಲಿಮನಿ ನಡೆಸಿದರು.
ವೇದಿಕೆಯಲ್ಲಿ ಕವಿಗಳಾದ ಬಿದಲೋಟಿ ರಂಗನಾಥ್, ಮಮತಾ ಅರಸಿಕೆರೆ, ಹಾಗೂ ಬಿ. ಶ್ರೀನಿವಾಸ ರವರಿಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ದಿವಂಗತ ಶೇಷಗಿರಿರಾವ್ ಹವಲ್ದಾರ್ ಪತ್ನಿ ಕಲಾವತಿ ಹವಲ್ದಾರ್, ಜೆ.ಎಮ್.ಎಸ್ ಅಧ್ಯಕ್ಷೆ ಚಂದ್ರಕುಮಾರಿ ಸ.ಮಾ.ವಿ.ವೇದಿಕೆ ಕಾರ್ಯಧ್ಯಕ್ಷ ಪಿಆರ್. ವೆಂಕಟೇಶ್ ಮತ್ತಿರರು ಇದ್ದರು. ಉಪನ್ಯಾಸಕ ಚಾಂದ್ ಪಾಷಾ ನಿರ್ವಹಿಸಿದರೆ, ಆಲಂಭಾಷಾ ಸ್ವಾಗತಿಸಿ ವಂದಿಸಿದರು.
One attachment • Scanned by Gmail