ರಾಜ್ಯಸಭಾ ಚುನಾವಣೆ ವಿಧಾನಸೌಧದಲ್ಲಿ ದೇಶ ವಿರೋಧಿ ಘೋಷಣೆಜನಗಣ ಒಕ್ಕೂಟದ ಗಂಗಿರೆಡ್ಡಿ ಖಂಡನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.28 : ಕಾಂಗ್ರೆಸ್ ಪಕ್ಷದಿಂದ ಸಯ್ಯಾದ್ ನಾಸೀರ್ ಹುಸೇನ್‍ರವರು ರಾಜ್ಯಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಅವರ ಅಭಿಮಾನಿಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗಿ ದೇಶಕ್ಕೆ ಮತ್ತು ರಾಜ್ಯಕ್ಕೆ ಅವಮಾನ ಮಾಡಿದ್ದಾರೆ, ಇದನ್ನು ಜನಗಣ ಒಕ್ಕೂಟದ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ನಗರಸಭಾ ಸದಸ್ಯ ಗಂಗಿರೆಡ್ಡೆ ಎನ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಯಾರೇ ಆಗಲಿ ಯಾವುದೇ ಸಂದರ್ಭದಲ್ಲಾಗಲಿ ದೇಶ ವಿರೋಧಿ ಘೋಷಣೆ ಮತ್ತು ದೇಶ ವಿರೋಧಿ ಚಟುವಟಿಕೆಯನ್ನು ನಡೆಸಿದಲ್ಲಿ ಅವರ ಮೇಲೆ ದೇಶದ್ರೋಹ ಮೊಕದ್ದಮೆಯನ್ನು ದಾಖಲಿಸುವ ಅವಕಾಶವಿದೆ. ಅದೇ ರೀತಿಯಾಗಿ ಮೇಲ್ಕಂಡ ಘಟನೆಯಲ್ಲಿ ದೇಶ ವಿರೋಧಿ ಘೋಷಣೆಯನ್ನು ಕೂಗಿದ ದೇಶ ವಿರೊಧಿಗಳನ್ನು ನಮ್ಮ ದೇಶದಿಂದ ಗಡಿಪಾರು ಮಾಡಬೇಕು ಮತ್ತು ಈ ಘಟನೆಗೆ ಕಾರಣವಾದ ನಾಸೀರ್ ಹುಸೇನ್ ರವರು ದೇಶದ 140 ಕೋಟಿ ಜನರ ಕ್ಷಮೆಯನ್ನು ಕೇಳಬೇಕು.
ಒಂದು ವೇಳೆ ದೇಶ ವಿರೋಧಿ ಘೋಷಣೆ ಮತ್ತು ಘಟನೆ ನಡೆದಿದ್ದೇ ನಿಜವಾದಲ್ಲಿ ಯಾವುದೇ ಕ್ಷಮೆಯಿಲ್ಲದೆ ಅಂತವರನ್ನು ದೇಶದಿಂದ ಹೊರಹಾಕಬೇಕು, ಮತ್ತು ಅಂತವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅವರಿಗೆ ಸ್ಥಾನಮಾನಗಳನ್ನು ನೀಡಬಾರದೆಂದು ಗಂಗಿರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.