ಅಂತರ್ಜಲ ಕ್ಷೀಣ; ಬಾಯಾರಿದ ಜಾನುವಾರು;ಸಂಕಷ್ಟದಲ್ಲಿ ರೈತರು.; ಮೇವು ನೀರು ಒದಗಿಸಲು ಒತ್ತಾಯ.
ವರದಿ:- ಹೆಚ್.ಬಾಬು ಮರೇನಹಳ್ಳಿ
ಸಂಜೆವಾಣಿ ವಾರ್ತೆ
ಜಗಳೂರು.ಫೆ.೨೮;- ದಿನೇ ದಿನ ಹೆಚ್ಚುತ್ತೀರುವ ಬಿಸಿಲಿಗೆ ಬೇಸಿಗೆಯ ಆರಂಭದಲ್ಲಿಯೇ ರಾಜ್ಯದೆಲ್ಲೆಡೆ ನೀರಿನ ಬಾಧೆ ಬಾಧಿಸುತ್ತಿದೆ ಆದ್ದರಂತೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದರಾಗಿದ್ದು, ಅಲ್ಲದೆ ಬರಗಾಲದ ರಣ ಭೀಕರತಗೆ ಕುರಿಗಾಯಿ ರೈತರು ದನ, ಕುರಿ, ಮೇಕೆ ಮಾರಾಟ ಮಾಡುವ ಕೊನೆಯ ಹಂತಕ್ಕೆ ತಲುಪಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿಯೇ ಪ್ರತಿ ಬಾರಿ ಬರಗಾಲ ಎದುರಿಸುವ ತಾಲೂಕು ಜಗಳೂರಾಗಿದ್ದು, ಬಯಲು ಸೀಮೆಯಲ್ಲಿ ಮತ್ತೆ ಅಂತರ್ಜಲ ಕ್ಷೀಣಿಸಿದ್ದು, ತಾಲೂಕಿನಲ್ಲಿ ಜಲ ಸಂಕಟ ಎದುರಾಗಿದೆ.ಹೌದು ಜಗಳೂರು ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ತಾತ್ಪರ್ಯ ಎದುರಾಗಿದ್ದು, ತಾಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲು ಆದೇಶಿಸಿದೆ ಅಲ್ಲದೆ ಬಾಡಿಗೆ ಬೋರ್‌ವೆಲ್ ಮೂಲಕ ನೀರು ನೀಡುತ್ತಿದೆ.ಆದರೆ ಜಾನುವಾರಗಳ ಕಡೆ ಗಮನ ಹರಿಸದೆ ಇರುವುದು ಬೇಸರದ ಸಂಗತಿಯಾಗಿದೆ.ಬತ್ತಿದ ಜಲ ಮೂಲಗಳು;-ತಾಲೂಕಿನಲ್ಲಿ ಕುರಿ, ಮೇಕೆ, ದನಗಳನ್ನು ಅವಲಂಬಿಸಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ ಅಲ್ಲದೆ ಅವುಗಳಿಂದಲ್ಲೆ ಸುಗಮ ಜೀವನ ನಡೆಸುತ್ತಿದ್ದಾರೆ. ಆದರೆ ಮುಂಗಾರು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕೆರೆ, ಹಳ್ಳ, ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿದ್ದು ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಕೊರತೆಯಿಂದ ಜಾನುವಾರು ಸಾಕಾಣೆದಾರರು ಪರಿತಾಪಿಸುವಂತಾಗಿದೆ.ಅರಣ್ಯಗಳಲ್ಲಿ ಮೇವಿನ ಕೊರತೆ :-ತಾಲೂಕಿನಲ್ಲಿ ಮಳೆಯಾದರು ಮೇವಿನ ಕೊರತೆ ಎದರಾಗುತ್ತಿತ್ತು, ಬಯಲು ಸೀಮೆ ಜಗಳೂರಿನಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ಅರಣ್ಯ ಭೂಮಿಗಳಲ್ಲಿ ಹಾಗೂ ಜಾನುವಾರುಗಳಿಗೆ ಕಾಯ್ದಿಟ್ಟ ಪ್ರದೇಶಗಳಲ್ಲಿ ಮೇವಿನ ಕೊರತೆ ಎದುರಾಗಿದ್ದು ಕುರಿ ಮೇಕೆ ದನ ಗಳ ಸಾಕುವುದೆ ರೈತರನ್ನು ಚಿಂತೆಗೆ ದೂಡಿದ್ದು, ಮೇವು ನೀರಿಗೆ ಸರ್ಕಾರಗಳು ಗಮನ ಹರಿಸಬೇಕಿದೆ. ಗ್ರಾ.ಪಂ ವ್ಯಾಪ್ತಿ ಗೋ ಶಾಲೆ ಸ್ಥಾಪನೆಗೆ ರೈತರ ಒತ್ತಾಯ;-ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ನೀರಿನ ಕೊರತೆ ಎದರಾಗಿದ್ದು, ಅಗತ್ಯವಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿ ದೊಡ್ಡ ಗ್ರಾಮಗಳಲ್ಲಿ ಮೇವಿನ ಕೊರತೆ ನೀಗಿಸುವ ಸಲುವಾಗಿ ಮೇವು ಬ್ಯಾಂಕ್ ಅಥವಾ ಗೋ ಶಾಲೆಗಳನ್ನು ತರೆಯಬೇಕು ಎಂದು ಕುರಿಗಾಯಿಗಳು, ರೈತರು ಒತ್ತಾಯ ಮಾಡುತ್ತಿದ್ದಾರೆ, ತಾಲೂಕು ಆಡಳಿತ ಪಶು ಇಲಾಖೆಯ ಸಹಯೋಗದಿಂದ ತೊರೆಸಾಲು ಭಾಗದಲ್ಲಿ ಸೇರಿದಂತೆ ಹಲವು ಕಡೆ ಗೋ ಶಾಲೆ ತೆರದು ರೈತರಿಗೆ ವರವಾಗಬೇಕಿದೆ.ತೊರೆಸಾಲು ಭಾಗದ ರೈತರಿಂದ ಗೋ ಶಾಲೆ ತೆರೆಯಲು ಮನವಿ ಮಾಡಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಶೀಘ್ರವೇ ಗೋ ಶಾಲೆ ತೆರೆಯಲಾಗುವುದು ಅಲ್ಲದೆ ಹಳ್ಳಿಗಳಲ್ಲಿ ಕುರಿಗಾಯಿಗಳು ನೀರಿನ ತಾತ್ಪರ್ಯ ಎದುರಿಸುತ್ತಿರುವುದು ಗಮನಕ್ಕೆ ಬಂದಿಲ್ಲ, ಒಂದು ವೇಳೆ ಆಂತಹ ಸಮಸ್ಯೆಗಳು ಗಮನಕ್ಕೆ ಬಂದೆರೆ ಕೂಡಲೆ ತಾಲೂಕು ಆಡಳಿತದ ಗಮನಕ್ಕೆ ತಂದು ಗ್ರಾಮ ಪಂಚಾಯಿತಿಗಳ ಮೂಲಕ ನೀರು ಒದಗಿಸಲು ಕಾರ್ಯ ಮಾಡಲಾಗುವುದು.- ಲಿಂಗರಾಜ್ ಸಹಾಯಕ ನಿರ್ದೇಶಕರು ತಾಲೂಕು ಪಶು ಇಲಾಖೆ.ತಾಲ್ಲೂಕಿನಲ್ಲಿ 1.20 ಲಕ್ಷ ಕುರಿ ಮೇಕೆಗಳು ಹಾಗೂ 42 ಸಾವಿರ ದನ ಎಮ್ಮೆಗಳು ಇವೆ, ಮೇವು ನೀರಿನ ಕೊರತೆ ಎದುರಾಗಿದ್ದು, ಸಂಬಂಧಿಸಿದ ಇಲಾಖೆಗಳು ಮೇವು ನೀರಿನ ಕೊರತೆ ನೀಗಿಸುವ ಅವಶ್ಯಕತೆ ಇದೆ.