ಜಾತ್ರಾ ಮಹೋತ್ಸವ
ಲಕ್ಷ್ಮೇಶ್ವರ,ಫೆ28 : ಪಟ್ಟಣದ ಡೋಹರ ಗಲ್ಲಿಯಲ್ಲಿ ಶ್ರೀ ಏಳು ಮಕ್ಕಳ ತಾಯಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶಿವಶರಣ ಡೋಹರ ಕಕ್ಕಯ್ಯ ಜಯಂತೋತ್ಸವ ಮತ್ತು ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಡಾ. ಮಾರ್ಕಂಡಯ್ಯ ದೊಡ್ಮನೆ ಅವರು ಈ ಸಮಾಜ ಚಿಕ್ಕದಾಗಿದ್ದರು ಎಲ್ಲಾ ಸಮಾಜಗಳೊಂದಿಗೆ ಬೆರೆತುಕೊಂಡು ಸಾಮರಸ್ಯದ ಬದುಕು ಸಾಗಿಸುತ್ತಿದೆ ಈ ಸಮಾಜದವರಿಗೆ ಸರ್ಕಾರ ಸಣ್ಣದಾಗಿದೆ ಎಂದು ನಿರ್ಲಕ್ಷ್ಯ ಮಾಡದೆ ಮುಖ್ಯ ವಾಹಿನಿಯಲ್ಲಿ ತರಲು ಯೋಜನೆಗಳನ್ನು ರೂಪಿಸಬೇಕು ಎಂದರು .
ಡೋಹರ ಕಕ್ಕಯ್ಯ ಅವರು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಮೊಟ್ಟ ಮೊದಲ ಸಂಸತ್ತಿನಲ್ಲಿ ಇದ್ದ ಒಬ್ಬ ಶಿವಶರಣರಾಗಿದ್ದರು ಅವರು ಕಾಯಕದ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಮುಖ್ಯ ವಾಹಿನಿಯಲ್ಲಿ ತರುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರವಹಿಸಿದ ಮಹಾಪ್ರಸಾದಿ ಶಿವ ಶರಣರಾಗಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಸಾಹಿತಿ, ಪೂರ್ಣಜಿ ಕರಾಟೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಸೋಮಣ್ಣ ಡಾಣಗಲ್ಲ ಮಹದೇವಪ್ಪ ಕೊತ್ತಲ ಓಂಕಾರಪ್ಪ ಗಜಕೋಶ ಮಲ್ಲೇಶಪ್ಪ ಗಜಕೋಶ ನಾಗೇಂದ್ರಪ್ಪ ಕರಾಟೆ ಫಕೀರಪ್ಪನಾರಾಯಣ ಕರ ಪುರಸಭೆ ಸದಸ್ಯರಾದ ಪೂಜಾ ಕರಾಟೆ ಇದ್ದರು ಇದೇ ಸಂದರ್ಭದಲ್ಲಿ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಗೀತಾ ಕರಾಟೆ ಅವರನ್ನು ಹಾಗೂ ಶಿವಶರಣ ಡೋಹರ ಕಕ್ಕಯ್ಯ ಕುರಿತು ಪ್ರಬಂಧ ಮಂಡಿಸಿದ ಡಾಕ್ಟರ್ ಮಾರ್ಕಂಡಯ್ಯ ದೊಡ್ಮನಿ ದಂಪತಿಗಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ಸತೀಶ್ ನಾರಾಯಣಕಾರ ಲಕ್ಷ್ಮಿಕಾಂತ್ ಕರಾಟೆ ಚಂದ್ರಶೇಖರ್ ಗಜಾಕೋಶ ನಿರ್ವಹಿಸಿದರು.