ಮಾಬ್ ನೃತ್ಯದ ಮೂಲಕ ಸಂವಿಧಾನ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.28:- ಸಂವಿಧಾನರಚನೆಯಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾಕೈಗೊಂಡಿದೆ.
ಭಾರತ ಸಂವಿಧಾನದ ಮಹತ್ವ, ಸಂವಿಧಾನವು ನೀಡಿರುವ ಹಕ್ಕು, ಸ್ವಾತಂತ್ರ್ಯಗಳು, ಅಧಿಕಾರಗಳು ಮತ್ತು ಸಂವಿಧಾನದಿಂದಲೇ ಭಾರತದ ಮತ್ತು ರಾಜ್ಯದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕತಿಕ, ಶೈಕ್ಷಣಿಕ ಮತ್ತು ಸವಾರ್ಂಗೀಣ ಅಭಿವೃದ್ಧಿ ಎಂಬ ಸಂದೇಶವನ್ನು ಎಲ್ಲರಿಗೂ ತಿಳಿಯಪಡಿಸುವ ಮತ್ತು ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನವರಿ 26, 2024 ರಿಂದ ಫೆಬ್ರವರಿ 24, 2024ರ ವರೆಗೆ ಸಂವಿಧಾನ ಜಾಗೃತಿ ಜಾಥಾಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾಜಕಲ್ಯಾಣ ವತಿಯಿಂದರಾಜ್ಯದ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಯೋಜನೆಯ ಭಾಗವಾಗಿ ಚಾಮರಾಜನಗರ ಚಾಮರಾ‍ಜೇಶ್ವರ ದೇವಸ್ಥಾನದ ಎದುರು ಫ್ಲ್ಯಾμï ಮಾಬ್ ನೃತ್ಯ ನಡೆಸಲಾಯಿತು.
ಈ ಮೂಲಕ ಸಾರ್ವಜನಿಕರಲ್ಲಿ ಹಾಡು, ನೃತ್ಯ ಮತ್ತುಯಕ್ಷಗಾನದ ಮೂಲಕ ಸಂವಿಧಾನ ಕುರಿತು ಅರಿವು ಮೂಡಿಸುವ ವಿಶೇಷ ಪ್ರಯತ್ನವಾಗುತ್ತಿದೆ. ಜೊತೆಗೆ ಸಂವಿಧಾನದ ಆಶಯಗಳ ಕುರಿತಾದ ಬಿತ್ತಿಪತ್ರಗಳ ಪ್ರದರ್ಶನ ಮಾಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಫ್ಲ್ಯಾμïಮಾಬ್ ನೃತ್ಯ ಕೈಗೊಳ್ಳಲಾಗುತ್ತಿದೆ. ಸಂವಿಧಾನದಅರಿವಿಗಾಗಿ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಈ ವಿಭಿನ್ನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.