ಸರ್ವ ರೋಗಗಳಿಗೆ ಸಂಗೀತ ಮದ್ದು ಸಂಗೀತದಿಂದ ಶಾಂತಿ ಸಾಮರಸ್ಯ:ಶರಣಬಸಪ್ಪ ಯಡ್ಡಳ್ಳಿ
ಸೇಡಂ,ಫೆ,28: ಸರ್ವ ರೋಗಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಗುತ್ತಿಗೆದಾರ ಶರಣಬಸಪ್ಪ ಯಡ್ಡಳ್ಳಿ ಅಭಿಪ್ರಾಯ ಪಟ್ಟರು.ತಾಲೂಕಿನ ಕುಕ್ಕುಂದಾ ಗ್ರಾಮದ ಶ್ರೀ ಮರ್ಗಮ್ಮ ದೇವಸ್ಥಾನದಲ್ಲಿ ಸರಸ್ವತಿ ಸಂಗೀತ ಮತ್ತು ಸಾಂಸ್ಕøತಿಕ ಕಲಾ ಸಂಸ್ಥೆ ಏರ್ಪಡಿಸಿದ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೀತ ಒಂದು ದೊಡ್ಡ ತಪಸ್ಸು ಅದಕ್ಕೆ ಜಾತಿ, ಭೇದ ಭಾವವಿಲ್ಲ ಸಂಗೀತದಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯ ಲಭಿಸುತ್ತದೆ. ನಿರಂತರವಾಗಿ ಇಂತಹ ಸಂಸ್ಕೃತಿಕ ಚಟುವಟಿಕೆಗಳು ನಡೆಸಿಕೊಂಡು ಬರುತ್ತಿರುವ ಸರಸ್ವತಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆಯ ಕಾರ್ಯ ಶ್ಲಾಘನಿಯವಾಗಿದೆ ಎಂದರು. ಯುವ ಮುಖಂಡರಾದ ಗಿರೀಶ್ ಗೌಡ ಮಾತನಾಡಿ ವಚನ, ದಾಸರ ಹಾಡು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ನೀಡುವ ಜೊತೆಗೆ ಸಮಾಜ ಕಟ್ಟುವಂತ ಶಕ್ತಿ ಸಂಗೀತದಲ್ಲಿದೆ ಎಂದರು. ಮುಖ್ಯ ಅತಿಥಿ ಶಾಂತರಾಜ್ ಫಾದರ್ ಸೇಡಂ ಮಾತನಾಡಿ ವಿಷಯ, ಧರ್ಮ, ಅಧ್ಯಾತ್ಮ ಸಂಸ್ಕಾರ, ಸಂಗೀತಾಜ್ಞಾನ ಮಕ್ಕಳಿಗೆ ತಿಳಿಸಿಕೊಟ್ಟರೆ ಖಂಡಿತ ಉತ್ತಮ ಜ್ಞಾನಿ ಆದರ್ಶಗಳಾಗಲು ಸಾಧ್ಯ ಎಂದರು. ಗ್ರಾಮದ ಗಣ್ಯರಾದ ನಾಗೇಂದ್ರಪ್ಪ ಪೆÇಲೀಸ್ ಪಾಟೀಲ್ ದಳಪತಿಗಳು ಅಧ್ಯಕ್ಷತೆ ವಹಿಸಿದರು. ನಾಗಣ ಗೌಡ ಆಲಮೇಲ್, ಹಣಮಂತರಾಯ ಯಡ್ಡಳ್ಳಿ ವೇದಿಕೆಯಲ್ಲಿದ್ದರು ಖ್ಯಾತ ಕಲಾವಿದ ಈಶ್ವರ ವಾಲಿಕಾರ್ ರವರ ಸುಗಮ ಸಂಗೀತ ಎಲ್ಲರನ್ನು ರಂಜಿಸಿತು. ಹಣ ಮಂತ್ ಭಜಂತ್ರಿ ವಚನ ಗಾಯನ, ಜಗದೀಶ್ ಯಡ್ಡಳ್ಳಿ ಭಕ್ತಿಗೀತೆ ಹಾಡಿದರು ಶಿವಶರಣ ಪೂಜಾರಿ ಜಾನಪದ ಗಾಯನ ನಡೆಸಿಕೊಟ್ಟರು. ವಿಶೇಷ ಚೇತನ ಕಲಾವಿದ ಶರಣಯ್ಯ ಸ್ವಾಮಿ ಕುಕ್ಕುಂದ ಮತ್ತು ಸುದರ್ಶನ್ ರೆಡ್ಡಿ ನಿಡಗುಂದಾ ತಬಲಾ ಸಾಥ ನೀಡಿದರು. ಜಗದೀಶ ಯಡ್ಡಳ್ಳಿ ನಿರೋಪಿಸಿದರು.ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲ್ ವಿಶ್ವಕರ್ಮ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ವಂದಿಸಿದರು.